ಸುಬ್ರಹ್ಮಣ್ಯ: ದ.ಕ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಕರಾವಳಿಯಲ್ಲೇ ಪ್ರಸಿದ್ಧಿಯನ್ನು ಪಡೆದಿರುವ ದೇವಾಲಯ. ಅದೆಷ್ಟೋ ಸಮಸ್ಯೆಗಳಿಗೆ ಇಲ್ಲಿ ಹರಕೆ ಹೇಳಿ ಪರಿಹಾರ ಕಂಡುಕೊಳ್ಳುವುದು ವಾಡಿಕೆ. ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ ಜನ ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿಗೆ ಅದೆಷ್ಟೋ ಸೆಲೆಬ್ರೆಟಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿದ್ದು, ವಿಶೇಷವಾಗಿ ಸರ್ಪ ಸಂಸ್ಕಾರ ಪೂಜೆಯನ್ನು ನೆರವೇರಿಸಿದ್ದಾರೆ.
ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಟಿ ಕತ್ರಿನಾ ಕೈಫ್ ದಿಢೀರ್ ಭೇಟಿ..!!
ಮಂಗಳವಾರ ಸುಬ್ರಹ್ಮಣ್ಯಕ್ಕೆ ಆಗಮಿಸಿದ ನಟಿ ಕತ್ರಿನಾ ಕೈಫ್ ಅವರು ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದರು. ಅಲ್ಲದೆ ಸರ್ಪ ಸಂಸ್ಕಾರ ಯಾಗ ಶಾಲೆಯಲ್ಲಿ ಸಂಕಲ್ಪ ಪೂಜೆಯಲ್ಲಿ ಪಾಲ್ಗೊಂಡು ಪೂಜಾ ವೃತವನ್ನು ನೆರವೇರಿಸಿದ್ದಾರೆ. ಕತ್ರಿನಾ ಕೈಫ್ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಸೇವೆ ಸಲ್ಲಿಸಲು ಕಾರಣ ಏನು ಹಾಗೂ ಯಾವ ಸಂಕಲ್ಪಕ್ಕೆ ಇದನ್ನು ಮಾಡಿದ್ದಾರೆ ಎನ್ನುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಸರ್ಪಸಂಸ್ಕಾರ ಪೂಜೆ....!!?
ಮೂಲಗಳ ಪ್ರಕಾರ ಮಕ್ಕಳಾಗದ ಕಾರಣದಿಂದ ಸಂತಾನಭಾಗ್ಯಕ್ಕಾಗಿ ನಟಿ ಈ ಪೂಜೆಯ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಜ್ಯೋತಿಷ್ಯರ ಸಲಹೆಯಂತೆ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ಪೂಜೆ ನೆರವೇರಿಸುತ್ತಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸ್ವತಃ ಕತ್ರಿನಾ ಕೈಫ್ ಅವರೇ ಮಾಧ್ಯಮಗಳಿಗಾಗಲಿ ಸ್ಥಳೀಯರಿಗಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.