ಕಣ್ಣೂರು: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಫಿಟ್ನೆಸ್, ಆರೋಗ್ಯದ ಬಗ್ಗೆ ಹೆಚ್ಚಿನ ಒಲವು, ಕಾಳಜಿಯನ್ನು ತೋರಿಸುತ್ತಾರೆ. ಇದಕ್ಕೆ ಡಯೆಟ್, ಯೋಗ, ಜಿಮ್ ನ ಮೊರೆ ಹೋಗುತ್ತಾರೆ. ಬದಲಾದ ಜೀವನಶೈಲಿ, ಆಹಾರ ಪದ್ಧತಿಯಿಂದ ಉತ್ತಮ ಆರೋಗ್ಯ ವನ್ನು ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇದೀಗ ಅದೇ ರೀತಿ ಡಯೆಟ್ ಫಾಲೋ ಮಾಡಿದ ಯುವತಿಯೋರ್ವಳು ಕೊನೆಯುಸಿರೆಳೆದಿದ್ದಾಳೆ.
ಯೂಟ್ಯೂಬ್ ನೋಡಿ ಡಯೆಟ್ ಮಾಡ್ತಿದ್ದ ಯುವತಿ ದಾರುಣ ಸಾವು...!!
ಯೂಟ್ಯೂಬ್ ನೋಡಿ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಮತ್ತು ಡಯೆಟ್ ದಿನಚರಿಯನ್ನು ಫಾಲೋ ಮಾಡ್ತಿದ್ದ ಯುವತಿಯೋರ್ವಳು ದಿಢೀರ್ ಕೊನೆಯುಸಿರೆಳೆದ ಘಟನೆ ಕೇರಳದಲ್ಲಿ ನಡೆದಿದೆ.
ಕಣ್ಣೂರಿನ ಕೈತೇರಿಕಂಡಿ ನಿವಾಸಿ ಹದಿನೆಂಟು ವರ್ಷದ ಎಂ.ಶ್ರೀನಂದ ಮೃತ ದುರ್ದೈವಿಯಾಗಿದ್ದಾಳೆ. ಈಕೆ ಅನಾರೋಗ್ಯಕ್ಕೀಡಾಗಿ ತಲಕ್ಕೇರಿ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಆಕೆಗೆ ಆಗಿದ್ದೇನು..?
ಅಧಿಕ ತೂಕ ಹೊಂದಿದ್ದ ಈಕೆ ಸಪೂರವಾಗಲು ಯೂಟ್ಯೂಬ್ ನೋಡಿ ಡಯೆಟ್ ರುಟೀನ್ ಫಾಲೋ ಮಾಡಿದ್ದಾಳೆ. ದೇಹಕ್ಕೆ ಬೇಕಾಗಿರುವ ಆಹಾರಕ್ಕಿಂತ ಕಡಿಮೆ ಆಹಾರ ಸೇವಿಸಿದ ಪರಿಣಾಮ ಆಕೆಯ ಹೊಟ್ಟೆ ಮತ್ತು ಅನ್ನನಾಳ ಕುಗ್ಗಿ ಅನಾರೋಗ್ಯಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದಾಳೆ.
ಸೂಕ್ತ ತಜ್ಞರ ಸಲಹೆ ಇಲ್ಲದೆ ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಬರುವ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳುವುದು ತಪ್ಪು. ನಮ್ಮ ದೇಹಕ್ಕನುಸಾರವಾಗಿ ಪೌಷ್ಠಿಕ ಆಹಾರ ಸೇವಿಸದೆ ಇದ್ದರೆ ಕೂಡಾ ಅಪಾಯ ಕಟ್ಟಿಟ್ಟ ಬುತ್ತಿ.