ಭಾರತೀಯ ರೈಲ್ವೇ ಇಲಾಖೆಯಿಂದ ಬಂತು ಹೊಸ ರೂಲ್ಸ್...!! ಟಿಕೆಟ್ ಕನ್ಫರ್ಮ್ ಆಗಿದ್ರೆ ಮಾತ್ರ ಎಂಟ್ರಿ‌...!!

  • 12 Mar 2025 07:00:02 PM

ದೆಹಲಿ:ನಾವು ದೂರದ ಊರುಗಳಿಗೆ ಪ್ರಯಾಣ ಮಾಡುವುದಾದರೆ ರೈಲಿನಲ್ಲಿ ಸಂಚರಿಸುವುದು ಉತ್ತಮ. ಅತೀ ಕಡಿಮೆ ಖರ್ಚಿನಲ್ಲಿ ಸುಖಕರವಾದ ಪ್ರಯಾಣ ಮಾಡಬಹುದು. ರೈಲ್ವೇ ಇಲಾಖೆಯಿಂದ ಆಗಾಗ ಹೊಸ ಹೊಸ ನಿಯಮಗಳು ಜಾರಿಯಾಗುತ್ತಲೇ ಇರುತ್ತದೆ. ಹಾಗೆಯೇ ನಿಯಮಗಳು ಬದಲು ಕೂಡಾ ಆಗುತ್ತಿರುತ್ತದೆ. ಇದೀಗ ರೈಲು ಪ್ರಯಾಣಿಕರಿಗೆ ಹೊಸದೊಂದು ರೂಲ್ಸ್ ಮಾಡಲಾಗಿದೆ. 

 

ಕನ್ಫರ್ಮ್ ಟಿಕೆಟ್ ಇದ್ರೆ ಮಾತ್ರ ನಿಲ್ದಾಣದೊಳಗೆ ಅವಕಾಶ...!!

 

ಇನ್ಮುಂದೆ ಪ್ರಯಾಣಿಕರು ರೈಲ್ವೇಯ ಕನ್ಫರ್ಮ್ ಟಿಕೆಟ್ ಇದ್ರೆ ಮಾತ್ರ ರೈಲ್ವೇ ನಿಲ್ದಾಣದೊಳಗೆ ಪ್ರವೇಶಿಸಲು ಅವಕಾಶ ಇರಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಸೂಚನೆ ನೀಡಿದೆ. ಸದ್ಯ ದೇಶದ ಅರವತ್ತು ರೈಲ್ವೇ ನಿಲ್ದಾಣಗಳಲ್ಲಿ ಈ ರೂಲ್ಸ್ ಅನುಷ್ಠಾನಕ್ಕೆ ತರಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಉನ್ನತ ರೈಲ್ವೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲಿನಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಮಿತಿಮೀರಿದೆ. ಜನದಟ್ಟಣೆಯನ್ನು ನಿಯಂತ್ರಿಸಲು ಈ ಕ್ರಮ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ. 

 

ಜನದಟ್ಟಣೆ ಕಂಟ್ರೋಲ್ ಮಾಡಲು ಹೊಸ ರೂಲ್ಸ್...!!

 

ಸದ್ಯಕ್ಕೆ ಹೊಸ ರೂಲ್ಸ್ ನಿಂದಾಗಿ ಜನರು ಸ್ವಲ್ಪ ತೊಂದರೆಗಳನ್ನು ಅನುಭವಿಸಬಹುದು. ಆದರೆ ಮತ್ತೆ ಅಭ್ಯಾಸವಾಗುತ್ತದೆ. ಭವಿಷ್ಯದಲ್ಲಿ ಕೂಡಾ ಇದು ಉಪಯೋಗಕ್ಕೆ ಬರಲಿದೆ. ಹಬ್ಬ ಹರಿದಿನ, ರಜಾ ದಿನಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆಗ ವ್ಯವಸ್ಥೆ ಹಾಳಾಗದಂತೆ ಮತ್ತು ಸಮರ್ಪಕ ವ್ಯವಸ್ಥೆ ಪೂರೈಸುವ ಉದ್ದೇಶದಿಂದ ಈ ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೂ ಇದು ಪ್ರಯೋಜನವಾಗಲಿದೆ.