ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ಅವರ ಹೆಸರು ಚರ್ಚೆಗೆ ಒಳಗಾಗಿರುವ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಇದೀಗ ಗಂಭೀರ ತಿರುವು ಪಡೆದುಕೊಂಡಿದೆ. ಈ ಪ್ರಕರಣವು 2020ರಲ್ಲಿ ನಡೆದ ಕೇರಳದ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣದೊಂದಿಗೆ ಹೋಲಿಕೆ ಹೊಂದಿದ್ದು, ಇದಕ್ಕೆ ಗಂಭೀರ ತನಿಖೆ ಅಗತ್ಯವಿದೆ ಎಂಬುದಾಗಿ ತೇಜಸ್ ಗೌಡ ಮನವಿ ಮಾಡಿಕೊಂಡಿದ್ದಾರೆ
ಈ ಸಂಬಂಧ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ED) ಗೆ ಮಾಹಿತಿ ನೀಡಲಾಗಿದ್ದು, ಪ್ರಕರಣದಲ್ಲಿ ರಾಜಕೀಯ ಅಥವಾ ಆಡಳಿತಾತ್ಮಕ ಪ್ರಭಾವ ಇರುವ ಸಾಧ್ಯತೆ ಇರುವುದರಿಂದ ಸಿಬಿಐ (CBI) ಮೂಲಕ ಸವಿಸ್ತಾರ ತನಿಖೆ ನಡೆಸುವಂತೆ ತೇಜಸ್ ಗೌಡ ಅವರು ಮನವಿಯ ಮೂಲಕ ಒತ್ತಾಯಿಸಿದ್ದಾರೆ. ಇದಲ್ಲದೇ, ಈ ಪ್ರಕರಣದ ಬಗ್ಗೆ ಗೃಹ ಸಚಿವಾಲಯ (MHA) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೂಡ ಗಮನ ಹರಿಸುವಂತೆ ಅವರು ಮನವಿಯನ್ನು ಮಾಡಿದ್ದಾರೆ.
ಅಧಿಕಾರಿಗಳು ಈ ಪ್ರಕರಣದ ಹಿಂದಿನ ಜಾಲ, ಪ್ರಮುಖ ಪಾತ್ರಧಾರಿಗಳು ಮತ್ತು ಅಂತರಾಷ್ಟ್ರೀಯ ಕಳ್ಳಸಾಗಾಣಿಕೆ ಸಂಪರ್ಕವನ್ನು ಪತ್ತೆ ಹಚ್ಚಲು ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ತೇಜಸ್ ಗೌಡ ಆಗ್ರಹ ವ್ಯಕ್ತಪಡಿಸಿದ್ದಾರೆ.