ದೆಹಲಿ: ದೇಶದಲ್ಲಿ ರಾಜಕೀಯ ವ್ಯವಸ್ಥೆ ತನ್ನದೇ ಆದ ನೀತಿ- ನಿಯಮಗಳನ್ನು ಒಳಗೊಂಡಿರುತ್ತದೆ. ಬೇರೆ ಬೇರೆ ದೇಶ ತನ್ನದೇ ಸಿದ್ಧಾಂತದಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ. ಇದೀಗ ನೂತನ ಕ್ರಮದ ಜಾರಿಗಾಗಿ ರಾಜಕೀಯ ವ್ಯವಸ್ಥೆ ದಿಟ್ಟ ಹೆಜ್ಜೆಯನ್ನಿಡಲು ಮುಂದಾಗಿದೆ.
ಇನ್ಮುಂದೆ `ಒಂದು ರಾಷ್ಟ್ರ, ಒಂದು ಚುನಾವಣೆ' ಹೊಸ ಕ್ರಮ..!
ಹೌದು. ಒಂದು ರಾಷ್ಟ್ರ, ಒಂದು ಚುನಾವಣೆ ವಿಧೇಯಕದ ಕುರಿತಾಗಿ ದೇಶಾದ್ಯಂತ ಜನರಿಂದ ಸಲಹೆಗಳನ್ನು ಸ್ವೀಕರಿಸಲು ವಿಧೇಯಕ ಪರಿಶೀಲನೆಗಾಗಿ ರಚಿಸಿರುವ ಜಂಟಿ ಸಂಸದೀಯ ಸಮಿತಿ ವತಿಯಿಂದ ಶೀಘ್ರದಲ್ಲಿಯೇ ವೆಬ್ಸೈಟ್ ಆರಂಭಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಪಿ.ಪಿ ಚೌಧರಿ ಹೇಳಿದ್ದಾರೆ.
ಸಂಪೂರ್ಣ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತಿರುವ ಸಮಿತಿಯು ಏಕಕಾಲದಲ್ಲಿ ಚುನಾವಣೆ ನಡೆಸುವ ವಿಷಯದ ಬಗ್ಗೆ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಬಯಸಿದೆ ಎಂದು ಹೇಳಿದ್ದಾರೆ.
ಹೈಕೋರ್ಟ್ ನಿವೃತ್ತ ನ್ಯಾಯಧೀಶನ ಅಭಿಪ್ರಾಯ ಸಂಗ್ರಹಿಸಿದ ಸಮಿತಿ...!!
ಜಂಟಿ ಸಂಸದೀಯ ಸಮಿತಿಯು ರಾಜ್ಯಸಭೆ ಸದಸ್ಯ ರಂಜನ್ ಗೊಗೋಯ್ ಮತ್ತು ದೆಹಲಿ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಅವರ ಅಭಿಪ್ರಾಯಗಳನ್ನು ಕೂಡಾ ಸಂಗ್ರಹಿಸಿದೆ.
ಅವರು ಕೂಡಾ ಈ ಬಗ್ಗೆ ಸುಪ್ತ ವಿಚಾರಧಾರೆಗಳನ್ನು ಹಂಚಿಕೊಂಡಿದ್ದಾರೆ. ಇನ್ಮುಂದೆ ಜನರ ಅಭಿಪ್ರಾಯಗಳಿಗೂ ಒತ್ತು ಕೊಟ್ಟು ಅವರಿಂದಲೂ ಸಮಿತಿ ಮುಂದಿನ ದಿನಗಳಲ್ಲಿ ಅಭಿಪ್ರಾಯ ಸಂಗ್ರಹಿಸಲಿದೆ ಎಂದು ತಿಳಿಸಿದೆ.