ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಮುಗ್ಧ ಜನರನ್ನು ಯಾಮಾರಿಸಿ ಅಧಿಕಾರದ ಗದ್ದುಗೆಯೇರಿತು. ಇದೀಗ ಅದನ್ನು ಬೇರೆ ಬೇರೆ ವಿಚಾರಗಳಿಂದ ವಸೂಲಿ ಮಾಡುತ್ತಿದ್ದಾರೆ. ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ಸರ್ಕಾರದಿಂದ ಸರ್ಕಾರಿ ಉದ್ಯೋಗಿಗಳೂ ನರಕ ಪಡುವಂತಾಗಿದೆ.
ಸರ್ಕಾರಿ ಸಿಬ್ಬಂದಿಗಳಿಗೆ ವೇತನವಿಲ್ಲ....
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಸರ್ಕಾರಿ ನೌಕರರ ವೇತನವನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳು ಕೂಡಾ ರೊಚ್ಚಿಗೆದ್ದಿದ್ದಾರೆ.
ತೆರಿಗೆ ಹೆಚ್ಚಳ, ಬೆಲೆ ಏರಿಕೆಯಿಂದ ಜನಸಾಮಾನ್ಯರು ಒಂದು ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಸರ್ಕಾರಿ ನೌಕರರು ವೇತನವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇವರ ಸಂಬಳ, ಗೌರವ ಧನ ಸೇರಿದಂತೆ ಒಂದಷ್ಟು ದುಡ್ಡು ಇಲ್ಲೇ ಜಾತ್ರೆಯಾಗುತ್ತಿದೆ. ಹೀಗಾದರೆ ಸರ್ಕಾರ ಜನಸಾಮಾನ್ಯರನ್ನು ಬಲಿಪಶು ಮಾಡಿ ಆಡಳಿತ ನಡೆಸಿದರೆ ಮುಂದೇನು ಗತಿ ಎಂದು ವಿಪಕ್ಷಗಳು ಪ್ರಶ್ನೆ ಎತ್ತಿದೆ.
ಸರ್ಕಾರದ ಹಣ ಪಡೆಯುವ ಹಕ್ಕು ಕಾರ್ಯಕರ್ತರಿಗಿದೆ- ಡಿಕೆಶಿ
ವಿರೋಧ ಪಕ್ಷಗಳು ಸರ್ಕಾರವನ್ನು ಗಂಭೀರವಾಗಿ ಆರೋಪಿಸಿ ಪ್ರಶ್ನಿಸಿದ ಬೆನ್ನಲ್ಲೇ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಇದೀಗ ಅವರು ನೀಡಿರುವ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ. ಇವರು ಬಿಜೆಪಿಗೆ ಟಾಂಗ್ ಕೊಟ್ಟು `ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಹಗಲು ರಾತ್ರಿ ಶ್ರಮಿಸಿದ್ದಾರೆ.
ಹೀಗಾಗಿ ಸರ್ಕಾರದ ಹಣ ಪಡೆಯುವ ಹಕ್ಕು ಕಾರ್ಯಕರ್ತರಿಗಿದೆ....ಅವರ ಶ್ರಮಕ್ಕೆ ಪ್ರತಿಫಲ ನೀಡುವುದರಲ್ಲಿ ತಪ್ಪೇನು....? ಎಂದು ಸದನದಲ್ಲಿ ಸಮರ್ಥಿಸಿಕೊಂಡಿದ್ದಾರೆ. ಇವರ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿದೆ.