10.30 ಆದರೂ ಕೆಲಸಕ್ಕೆ ಹಾಜರಾಗದ ಕೆಲವು ಅಧಿಕಾರಿಗಳು ಹೇಳುವವರಿಲ್ಲ ಕೇಳುವವರಿಲ್ಲ ಪುತ್ತೂರು ಆಡಳಿತ ಸೌಧದ ದುರಾವಸ್ಥೆ ಶಾಸಕರ ಡೈಲಾಗ್ ಗಳು ಸೋಶಿಯಲ್‌ ಮೀಡಿಯಾಗೆ ಮಾತ್ರ ಸೀಮಿತವಾ.....?

  • 14 Mar 2025 10:48:02 AM

10.30 ಆದರೂ ಕೆಲಸಕ್ಕೆ ಹಾಜರಾಗದ ಕೆಲವು ಅಧಿಕಾರಿಗಳು ಹೇಳುವವರಿಲ್ಲ ಕೇಳುವವರಿಲ್ಲ ಪುತ್ತೂರು ಆಡಳಿತ ಸೌಧದ ದುರಾವಸ್ಥೆ ಶಾಸಕರ ಡೈಲಾಗ್ ಗಳು ಸೋಶಿಯಲ್‌ ಮೀಡಿಯಾಗೆ ಮಾತ್ರ ಸೀಮಿತವಾ.....? ಎನ್ನುತ್ತಿದ್ದಾರೆ  ಸಾರ್ವಜನಿಕರು

 

ಹೌದು ಪುತ್ತೂರು ಆಡಳಿ ಸೌಧದ ದುರಾವಸ್ಥಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ ಶಾಸಕರ ಕಛೇರಿ ಬಳಿಯಲ್ಲಿಯೇ ಇರುವ ಆಡಳಿದ ಸೌಧದ ಸಿಬ್ಬಂದಿಗಳನ್ನು ನಿಭಾಯಿಸಲು ವಿಫಲರಾದರೇ ಪುತ್ತೂರ ಶಾಸಕರು....?

ಆಡಳಿತ ಸೌಧ ದ ಒಳಗಡೆ ಅನೇಕ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು  ಯಾವುದೇ ಇಲಾಖೆಯ ಒಳಗಡೆ ಬೆಳಗ್ಗೆ 10 ಗಂಟೆಗೆ ಹೋದರೆ ಕೇವಲ ಬೆರಳೆಣಿಕೆಯ ಅಧಿಕಾರಿಗಳು ಮಾತ್ರ ಕಾಣ ಸಿಗುತ್ತಾರೆ ಯಾಕೇ ಲೇಟ್‌ ಎಂದು ಯಾರಾದರು ಸಾರ್ವಜನಿಕರು ಕೇಳಿದರೆ ಬೇಜವಬ್ದಾರಿ ಉತ್ತರ ಮಾತ್ರ ಸಿಗುತ್ತದೆ

ಇನ್ನು ಸರ್ವೆ ಇಲಾಖೆಗೆ ಹೋದರೆ ಅವರದ್ದು ಸುಲಭ ಉತ್ತರದಲ್ಲಿ ಮುಗಿದು ಹೋಗುತ್ತದೆ  ಫೀಲ್ಡ್‌ ಇತ್ತು ಹಾಗೆ ಲೇಟ್‌ ಎಂದು ಆದರೆ ಯಾರೂ ಕೂಡ ಕಛೇರಿಗೆ ಹಾಜರಾಗದೆ ಫೀಲ್ಡ್‌ ಗೆ ಹೋಗುವುದಿಲ್ಲ ಜನರಿಗೆ ಇಂತಹ ಬೇಜವಬ್ದಾರಿ ಉತ್ತರ ಕೊಡುತ್ತಾರೆ

ಆರ್‌ ಟಿ ಸಿ ತೆಗೆಯಲು ಹೋಗೋಣವೆಂದರೆ 10.30 ಆಗದೆ ಅವರ ಕಂಪ್ಯೂಟರ್‌ ಆನ್‌ ಆಗುವುದೇ ಇಲ್ಲ ಬರುವಾಗಲೇ ಅರ್ಧ ಗಂಟೆ ಲೇಟ್‌ ಸಾರ್ವಜನಿಕರು ಬಂದು ಕಾಯುವ ಪರಿಸ್ಥಿತಿ ಇವರಿಗೆ ಹೇಳುವವರು ಕೇಳುವವರು ಇಲ್ಲ

ಪುತ್ತೂರಿನ ರೆಕಾರ್ಡ್‌ ರೂಮ್‌ ನ ಹಣೆಬರಹ ಇನ್ನೊಂದು ಕಡೆ ಕರೆಂಟ್‌ ಇದ್ದರೆ ಮಾತ್ರ ಅಲ್ಲಿ ಸಾರ್ವಜನಿಕರ ಕೆಲಸ ಇಲ್ಲವಾದಲ್ಲಿ ಕತ್ತಲೆ ಕೋಣೆ ಮಾತ್ರ ರೆಕಾರ್ಡ್‌ ರೂಂ  ಅರ್ಜಿ ಕೊಟ್ಟವರು ದಾಖಲೆ ಪಡೆದುಕೊಳ್ಳಲು ನರಕ ಬರುವ ಪರಿಸ್ಥಿತಿ

ಇದೆಲ್ಲವನ್ನೂ ಗಮನಿಸಬೇಕಾದ ತಹಶೀಲ್ದಾರರು ಯಾವಾಗ ಬರುತ್ತಾರೆ ಯಾವಾಗ ಹೋಗುತ್ತಾರೆ ಎಂಬುವುದೇ ತಿಳಿಯುವುದಿಲ್ಲ  ಇನ್ನು ತಹಶೀಲ್ದಾರರಲ್ಲಿ ಸಾರ್ವಜನಿಕರು ಯಾರಾದರೂ ದೂರು ನೀಡಿದರೆ ನಾನು ತಹಶಿಲ್ದಾರ್‌ ನನಗೆ ಗೊತ್ತಿದೆ ಹೇಗೆ ಕೆಲಸ ಮಾಡಬೇಕೆಂದು ಎನ್ನುವ ಉಡಾಫೆಯ ಉತ್ತರ ಬರುತ್ತದೆ  ಇನ್ನು ಎಸಿ ಯವರಲ್ಲಿ ಕೇಳೋಣವೆಂದರೆ ಅವರು ಹೊಸಬರು 

ಸದಾ ಪುತ್ತೂರು ರಾಮ ರಾಜ್ಯ ನನ್ನ ಆಡಳಿತದಲ್ಲಿ ಭ್ರಷ್ಟಾಚಾರ ಇಲ್ಲ ಎಲ್ಲವೂ ಸರಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸುವ ಶಾಸಕರು ಇತ್ತ ಕಡೆ ತಲೆ ಹಾಕಿಯೂ ಮಲಗುವುದಿಲ್ಲ ಎಲ್ಲ ಕೇವಲ ಸೋಶಿಯಲ್‌ ಮೀಡಿಯಾಗೆ  ಮತ್ತು ಬಾಷಣಕ್ಕೆ  ಸೀಮಿತ ಎನ್ನುತ್ತಾರೆ ಕೆಲವು ಸಾರ್ವಜನಿಕರು

ಇಂತಹ ದುರಾಡಳಿತವನ್ನು  ಪ್ರಶ್ನಿಸಬೇಕಾದ ವಿರೋಧ ಪಕ್ಷ  ಪುತ್ತೂರಿನಲ್ಲಿ ಗಾಢ ನಿದ್ರೆಯಲ್ಲಿದೆ ಎಂದೆನಿಸುತ್ತದೆ ಅಥವಾ ಆಡಳಿತ ಪಕ್ಷದೊಂದಿಗೆ ಎಡ್ಜಸ್ಟ್‌ ಮೆಂಟ್‌ ಮಾಡಿಕೊಂಡಿದಾ ಎನ್ನುವ ಅನುಮಾನ ಕೂಡಾ ಮೂಡುತ್ತಿದೆ

ಆಡಳಿತ ಸೌಧದಲ್ಲಿ ಸ್ವಲ್ಪ ಸಮಯಕ್ಕೆ ಸರಿಯಾಗಿ ಹಾಜರಾಗುವುದು ಕೆಲವು ಮಹಿಳಾ ಸಿಬ್ಬಂದಿಗಳು ಮಾತ್ರ

ಇಷ್ಟೆಲ್ಲ ಸಮಸ್ಯೆಗಳು ಪುತ್ತೂರಿನ ಆಡಳಿತ ಸೌಧದಲ್ಲಿರುವಾಗ ಶಾಸಕರು ಇದನ್ನು ಸರಿಪಡಿಸದೇ ಇರುವುದು ಬೇಸರದ ಸಂಗತಿ ಸಾಮಾಜಿಕ ಜಾಲಾತಾಣದಲ್ಲಿ  ಮಾತ್ರ ಶಾಸಕರ ಕೆಲಸ ಎನ್ನುತ್ತಾರೆ  ನೊಂದ ಸಾರ್ವಜನಿಕರು