ಕಾರ್ಕಳ : ಕಾರ್ಕಳಾದ ಮಿಯ್ಯಾರು ಎಂಬ ಗ್ರಾಮದ 18 ವರ್ಷದ ಅಮೂಲ್ಯ ಎಂಬ ಯುವತಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಮಂಜಿರಾಯಿ ಕಂಬಳದ ನಿವಾಸಿಯಾದ ಅಮೂಲ್ಯ, ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೊರಟಿದ್ದಳು. ಬಳಿಕ ಮನೆಗೂ ಬಾರದೆ, ಬ್ಯಾಂಕಿಗೂ ಹೋಗದೆ ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.
ಪೋಷಕರು ಆಕೆಯ ಮೊಬೈಲ್ ಗೆ ಸಂಪರ್ಕಿಸಲು ಯತ್ನಿಸಿದಾಗ, ತಾನು ಬೆಂಗಳೂರಿಗೆ ಹೋಗಿದ್ದೇನೆ ತಿಳಿಸಿದ್ದಾಳೆಯೆಂದೂ ಅದಾದನಂತರ ಯಾವುದೇ ಮಾಹಿತಿ ದೊರಕಿಲ್ಲವೆಂದೂ ಈ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಲಾಗಿದೆ.