ತಾಲೂಕು ಆಡಳಿತ ಸೌಧಕ್ಕೆ ಅಧಿಕಾರಿಗಳು ತಡವಾಗಿ ಹಾಜರಾಗುತ್ತಿರುವ ಹಿನ್ನೆಲೆ ಹಿಂದು ರಿಪಬ್ಲಿಕ್ ಟಿವಿ ಈ ವಿಚಾರವಾಗಿ ನ್ಯೂಸ್ ಮಾಡಿರುವ ಹಿನ್ನೆಲೆ ಎಚ್ಚೆತ್ತುಕೊಂಡ ಪುತ್ತೂರಿನ ಶಾಸಕರು ಕೂಡಲೇ ತಾಲೂಕು ಕಚೇರಿಗೆ 10 ಗಂಟೆಯ ವೇಳೆಗೆ ಹೋಗಿ ತಡವಾಗಿ ಕೆಲಸಕ್ಕೆ ಹಾಜರಾಗುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ಹಿಂದು ರಿಪಬ್ಲಿಕ್ ಟಿವಿಯ ನ್ಯೂಸ್ ಅನ್ನು ಗಮನಿಸಿ ಕೂಡಲೇ ತಾಲೂಕು ಕಚೇರಿಗೆ ದಾಳಿ ನಡೆಸಿ ಅಧಿಕಾರಿಗಳ ಚಳಿ ಬಿಡಿಸಿದ ಶಾಸಕರ ಪರವಾಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ
ಇನ್ನಾದರೂ ಪುತ್ತೂರು ತಾಲೂಕು ಆಡಳಿತ ಸೌಧದ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ
ಹಿಂದು ರಿಪಬ್ಲಿಕ್ ಟಿವಿಯ ನ್ಯೂಸ್ ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ