ಸಾಲೆತ್ತೂರು: ಸಾಲೆತ್ತೂರು ಪಾಲ್ತಾಜೆ ನಿವಾಸಿ ರಾಜೇಶ್ ಅವರ ಮನೆಯ ಗೋ ಮಾತೆ ಇಂದು ಅಕಾಲಿಕವಾಗಿ ಮರಣ ಹೊಂದಿದ್ದು,
ಇದರಿಂದ ಕುಟುಂಬ ಹಾಗೂ ಹಿತೈಷಿಗಳಲ್ಲಿ ದುಃಖದ ಛಾಯೆ ನೆಲಸಿದೆ.
ಮನೆದೇವಿಯಾಗಿ ಆರಾಡಿಸುವ ಗೋ ಮಾತೆಯ ಅಗಲುವಿಕೆ,
ಪ್ರಾಣಿ ಪ್ರೇಮಿಗಳಲ್ಲಿ ಸಂಕಟವನ್ನುಂಟುಮಾಡಿದೆ.
ಈ ದುಃಖದ ಸಂದರ್ಭದಲ್ಲಿ ಶ್ರೀದೇವಿ ಯುವಕ ಸಂಘ ಸೆರ್ಕಳ ಮತ್ತು ಮಹಮ್ಮಾಯಿ ಗೆಳೆಯರ ಬಳಗ ಕಟ್ಟತ್ತಿಲ ಪಾಲ್ತಾಜೆ ಇದರ ಸದಸ್ಯರು ಮಾನವೀಯತೆ ಮೆರೆದು,
ಗೋ ಮಾತೆಯ ಅಂತ್ಯಕ್ರಿಯೆಯನ್ನು ನೆರವೇರಿಸಿದರು.
ಈ ಪುಣ್ಯ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಸ್ವರ್ಗಸ್ಥ ಗೋ ಮಾತೆಗೆ ಓಂ ಶಾಂತಿ!