ಹಾವೇರಿ: ಇತ್ತೀಚೆಗೆ ಮಾಸೂರಿನಲ್ಲಿ ಪ್ರೀತಿ ಮೋಸದ ಜಾಲಕ್ಕೆ ಸಿಲುಕಿ (ಲವ್ ಜಿಹಾದ್) ಕಾರಣಕ್ಕೆ ಅಮಾನುಷವಾಗಿ ಹತ್ಯೆಯಾಗಿರುವ ಸ್ವಾತಿ ಬ್ಯಾಡಗಿ ಪ್ರಕರಣವನ್ನು ಖಂಡಿಸಿ, ಆಕೆಯ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಇಂದು ಸಂಜೆ 6:00ಕ್ಕೆ ಹಾವೇರಿ ನಗರದ ಸುಭಾಷ್ ವೃತದಲ್ಲಿ ದೀಪ ಬೆಳಗಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಯುವಕ ಮಂಡಳಿ ಹಾವೇರಿ ಇದರ ವತಿಯಿಂದ ನಡೆಯುತ್ತಿರುವ ಈ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ, ಆರೋಪಿಗಳಿಗೆ ಶೀಘ್ರ ಮರಣದಂಡನೆ ವಿಧಿಸುವಂತೆ ಆಗ್ರಹಿಸೋಣ ಎಂದು ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ನೇತಾಜಿ ಸುಭಾಷ್ ಚಂದ್ರ ಬೋಸ್ ಯುವಕ ಮಂಡಳಿ, ಹಾವೇರಿ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.