ಉಡುಪಿ: ಮಣಿಪಾಲದ ಪಂಪ್ ಹೌಸ್ ಬಳಿ ಮತ್ತೊಂದು ಆಘಾತಕಾರಿ ಅಪಘಾತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಕಾರೊಂದು ಹೊಂಡಕ್ಕೆ ಬಿದ್ದು ಪ್ರಯಾಣಿಕರು ಆತಂಕಕ್ಕೀಡಾದರು.
ಈ ಪ್ರದೇಶದಲ್ಲಿ ಅಪಘಾತಗಳ ದಿನೇ ದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತಪಡಿಸಿದ್ದಾರೆ.
ಕಾರಿನಲ್ಲಿ ನಾಲ್ವರು ಪ್ರಯಾಣಿಕರು ಇದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಅದರಲ್ಲಿ ಪ್ರಯಾಣಿಕರು ಭಾರೀ ಅನಾಹುತದಿಂದ ಪಾರಾಗಿದ್ದಾರೆ ಎಂಡೆನ್ನಲಾಗಿದೆ.
ಸ್ಥಳೀಯರು ಕೂಡಲೇ ಈ ಘಟನೆಯನ್ನು ಗಮನಿಸಿ, ಪೊಲೀಸರ ಸಹಾಯದಿಂದ ಹೊಂಡಕ್ಕೆ ಬಿದ್ದ ಕಾರನ್ನು ಸುರಕ್ಷಿತವಾಗಿ ಹೊರತೆಗೆಡಿದ್ದಾರೆ
ಈ ಪ್ರದೇಶದ ರಸ್ತೆಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಇದರಿಂದಾಗಿ ನಿರಂತರ ಅಪಘಾತಗಳ ಭೀತಿ ಎದುರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.