ಮೂಡಬಿದಿರೆ: ಒಂದು ಫೋನ್ ಮಾಡಿದರೆ ಸಾಕು ಕರೆಗೆ ಸ್ಪಂದಿಸಿ ಓಡೋಡಿ ಬರುತ್ತಿದ್ದ, ಸಮಾಜದ ಒಳಿತಿಗಾಗಿ ಸದಾ ತನ್ನನ್ನು ತಾನು ಮುಡಿಪಾಗಿಟ್ಟುಕೊಂಡು ಸಮಾಜ ಸೇವೆಗಳಿಗೆ ಕಾರ್ಯನಿರತವಾಗಿದ್ದ ಹಿಂದೂ ಕಾರ್ಯಕರ್ತ ವಿಜೇಶ್ ಹೃದಯಾಘಾತದಿಂದ ಅಕಾಲಿಕವಾಗಿ ಮೃತಪಟ್ಟಿದ್ದಾರೆ.
ಅನಾರೋಗ್ಯಪೀಡಿತ ಬಡವರಿಗಾಗಿ ವೇಷಧಾರಿಯಾಗಿ ಧನಸಂಗ್ರಹ ಮಾಡುವ ಹೃದಯವಂತನಾಗಿದ್ದ ವಿಜೇಶ್, ಕೇವಲ ತನ್ನ ತಾಯಿಗೆ ಮಾತ್ರವಲ್ಲ, ಹಿಂದೂ ಸಮಾಜಕ್ಕೂ ಆಧಾರವಾಗಿದ್ದ. ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ.
ವಿಜೇಶ್ ಅವರ ಕುಟುಂಬ, ವಿಶೇಷವಾಗಿ ಅವರ ತಾಯಿ, ಆರ್ಥಿಕ ಹಾಗೂ ಮಾನಸಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹಿಂದೂ ಸಮಾಜದ ಸೇವೆಗೆ ಸದಾ ಜೀವನವನ್ನು ಮುಡಿಪಾಗಿಟ್ಟಿದ್ದ ವಿಜೇಶ್ ಅವರ ಕುಟುಂಬಕ್ಕೆ ನಾವು ನೆರವಾಗೋಣ ಅವರ ಅಪೂರ್ಣ ಕನಸುಗಳ ನೆರವಿಗೆ ಧಾವಿಸಿ, ಅವುಗಳನ್ನು ನನಸು ಮಾಡುವ ದಿಕ್ಕಿನಲ್ಲಿ ಹೆಜ್ಜೆ ಹಾಕೋಣ.
ಸಹಾಯ ಹಸ್ತ ಚಾಚೋಣ. ಈಗಾಗಲೇ ಆಸ್ಪತ್ರೆ ಬಿಲ್ 11ಲಕ್ಷ ದಾಟಿದ್ದು ಈ ನಡುವೆ ಆತನ ಮನೆಯ ದುರಸ್ತಿ ಕೆಲಸ ಮತ್ತು ತಾಯಿಗೆ ಶಾಶ್ವತ ನೆರವು ಪರಿಹಾರ ಒದಗಿಸಲು ವಿಶ್ವ ಹಿಂದೂ ಪರಿಷತ್ 20ಲಕ್ಷ ಸಹಾಯ ಹಸ್ತವನ್ನು ನೀಡಬೇಕಾಗಿ ಗುರಿಯನ್ನು ಇಟ್ಟುಕೊಂಡಿದೆ.
ಈ ದುಃಖದ ಸಂದರ್ಭದಲ್ಲಿ ಎಲ್ಲರೂ ವಿಜೇಶ್ ಕುಟುಂಬದ ಪರವಾಗಿ ಒಂದು ವಾರ ಕೈಜೋಡಿಸೋಣ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮೂಲಕ ಈ ಸುದ್ದಿ ಹಂಚಿ, ಹೊರ ರಾಜ್ಯ ಮತ್ತು ದೇಶದಲ್ಲಿರುವ ನಮ್ಮವರಿಗೂ ತಲುಪಿಸೋಣ. ಸಮಾಜದ ಸೇವಕರನ್ನು ನಾವು ಎಂದಿಗೂ ಕೈಬಿಡಲ್ಲ. ಆತನ ತಾಯಿಗೆ ನಾವು ಮಕ್ಕಳಾಗೋಣ