ಪರೀಕ್ಷೆಯ ಓಟ ಇಲ್ಲ, ತಕ್ಷಣ ನೇಮಕಾತಿ – ಸರ್ಕಾರಿ ಹುದ್ದೆಗೆ ನಿಮ್ಮ ಹೆಸರನ್ನು ನೊಂದಾಯಿಸಿ

  • 18 Mar 2025 03:09:58 PM

ಸರ್ಕಾರಿ ಕೆಲಸ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ.. ಆದರೆ, ಇದೀಗ ಯಾವುದೇ ಪರೀಕ್ಷೆ ಇಲ್ಲದೇ ನೇರ ಸಂದರ್ಶನದ ಮೂಲಕ ಸರ್ಕಾರಿ ಹುದ್ದೆಗೆ ಆಯ್ಕೆ ಮಾಡಲಾಗುವ ಸುವರ್ಣ ಅವಕಾಶ ಒದಗಿ ಬಂದಿದೆ. 

 

 

ಆ ಸುವರ್ಣ ಅವಕಾಶ ಏನೆಂದು ತಿಳಿಯಬೇಕೆ???

 

ಆಯಿಲ್ ಇಂಡಿಯಾ ಲಿಮಿಟೆಡ್ ತನ್ನ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಭೂವಿಜ್ಞಾನಿ, ಸಿವಿಲ್ ಎಂಜಿನಿಯರ್ ಮತ್ತು ಸ್ಟೋರ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.

 

ಯಾರಿಗೆಲ್ಲ ಅರ್ಜಿ ಸಲ್ಲಿಸಬಹುದು??

 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಟ ವಯಸ್ಸು 24 ವರ್ಷ ಮತ್ತು ಗರಿಷ್ಠ ವಯಸ್ಸು 50 ವರ್ಷ ಆಗಿರಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಕೊನೆಯ ದಿನಾಂಕ ಮಾರ್ಚ್ 21, 2025 ಆಗಿರುತ್ತದೆ. 

 

 

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ನೇರ ಸಂದರ್ಶನದ ಮೂಲಕ ನಡೆಯಲಿರುವುದರಿಂದ ಇದು ಸರಳ ಮತ್ತು ಸುಲಭವಾಗಿರುವುದು govt job ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.

 

ಆಸಕ್ತರು ಆಯಿಲ್ ಇಂಡಿಯಾ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಮತ್ತು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ಉದ್ಯೋಗಾರ್ಹ ಅಭ್ಯರ್ಥಿಗಳಿಗೆ ಒಳ್ಳೆಯ ಅವಕಾಶವಾಗಿದ್ದು, ಸರಿಯಾದ ಸಮಯದಲ್ಲಿ ಅರ್ಜಿ ಸಲ್ಲಿಸಿ ಸರಕಾರಿ ಉದ್ಯೋಗ ನಿಮ್ಮದಾಗಿಸಿ.