ಉಡುಪಿಯಲ್ಲಿ ಅಕ್ರಮ ಹೋಂ ಸ್ಟೇಗಳು ಬೆಳಕಿಗೆ!; ಎರಡನೇ ನೋಟಿಸ್ ಜಾರಿ! ಮುಂದೇನು?

  • 18 Mar 2025 07:27:59 PM

ಉಡುಪಿ: ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಹೋಂ ಸ್ಟೇಗಳನ್ನು ಪತ್ತೆ ಮಾಡಿ ನಿಯಂತ್ರಣಕ್ಕೆ ತರಲು ಪ್ರವಾಸೋದ್ಯಮ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 187 ಹೋಂ ಸ್ಟೇಗಳು ಅಧಿಕೃತ ನೋಂದಣಿ ಹೊಂದಿದ್ದು, ಆದರೆ ಸುಮಾರು 120 ಹೋಂ ಸ್ಟೇಗಳು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.

 

ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ 187 ಹೋಂ ಸ್ಟೇಗಳು ನೋಂದಣಿ ಹೊಂದಿದ್ದು, ಆದರೆ ಸುಮಾರು 120 ಹೋಂ ಸ್ಟೇಗಳು ಅನಧಿಕೃತವಾಗಿ ಕಾರ್ಯಾಚರಿಸುತ್ತಿವೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ, ಪ್ರವಾಸೋದ್ಯಮ ಇಲಾಖೆ ಎರಡನೇ ಸುತ್ತಿನ ನೋಟಿಸ್ ಜಾರಿ ಮಾಡಿದೆ.

 

ನೋಟಿಸ್‌ಗೆ ಸ್ಪಂದಿಸದ ಹೋಂ ಸ್ಟೇಗಳ ವಿರುದ್ಧ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ಶಿಫಾರಸ್ಸು ಮಾಡಿ ಜಿಲ್ಲಾಡಳಿತದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅದುವೇ ಅಂತಿಮ ನಿರ್ಧಾರವಾಗಿರುತ್ತದೆ.

 

ಇನ್ನು, ದಕ್ಷಿಣ ಕನ್ನಡದಲ್ಲಿ ಯಾವುದೇ ಅನಧಿಕೃತ ಹೋಂ ಸ್ಟೇ ಇಲ್ಲವೆಂದು ಸ್ಪಷ್ಟನೆಯ ಹಿನ್ನೆಲೆಯಲ್ಲಿ, ಉಡುಪಿಯಲ್ಲೂ ಇಂತಹ ಹೋಂ ಸ್ಟೇಗಳಿಗೆ ಕಡಿವಾಣ ಹಾಕಬೇಕೆಂದು ಪ್ರವಾಸೋದ್ಯಮ ಇಲಾಖೆ ಗಂಭೀರವಾಗಿ ಕ್ರಮ ಕೈಗೊಳ್ಳುತ್ತಿದೆ