ನವಮಾಸ ಸ್ಫೂರ್ತಿದಾಯಕ ಗಗನಯಾನದ ಬಳಿಕ ಭೂಮಿಯ ಮಡಿಲಿಗೆ ಮರಳಿದ ಸುನೀತಾ ವಿಲಿಯನ್ಸ್ ಮತ್ತು ಸಹಾಯತ್ರಿಗಳು!

  • 19 Mar 2025 11:08:09 AM

ವಾಷಿಂಗ್ಟನ್: ನವಮಾಸಗಳಿಗಿಂತಲೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹಯಾತ್ರಿಗಳು ಕೊನೆಗೂ ಸುರಕ್ಷಿತವಾಗಿ ಧರೆಗೆ ಮರಳಿದ್ದಾರೆ. ತಾಂತ್ರಿಕ ದೋಷಗಳಿಂದಾಗಿ ನಿರೀಕ್ಷೆಗೂ ಮೀರಿ ಬಾಹ್ಯಾಕಾಶದಲ್ಲಿ 1ವಾರ ಕಳೆಯಬೇಕಾದ ಈ ಪ್ರಯಾಣ ನವಮಾಸದತ್ತ ಅಲ್ಲೇ ಇದ್ದು ಹಿಂತಿರುಗಿದ ಈ ತಂಡವು ವಿಜ್ಞಾನ ಲೋಕದಲ್ಲಿ ಹೊಸ ದಾಖಲೆ ಬರೆಯಿತು.

 

ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತು, ಭೂಮಿಯತ್ತ ವಾಪಸ್ಸಾಯಿತು. ಭಯ, ಆತಂಕ, ನಿರೀಕ್ಷೆಗಳೊಂದಿಗೆ ಹದಿನೇಳು ಗಂಟೆಗಳ ನಿರಂತರ ಪ್ರಯಾಣದ ನಂತರ , ಭಾರತೀಯ ಕಾಲಮಾನ ಪ್ರಕಾರ ಇಂದು ಬೆಳಗ್ಗೆ ನಸುಕಿನ ಜಾವ 3:27ಕ್ಕೆ ಅಮೇರಿಕಾದ ಫ್ಲೋರಿಡಾ ಕರಾವಳಿಯಲ್ಲಿ ಲ್ಯಾಂಡ್ ಆಗಿತು. ಈ ಯಶಸ್ವಿ ಮರಳುವಿಕೆಯು , ಬಾಹ್ಯಾಕಾಶ ವಿಜ್ಞಾನದಲ್ಲಿ ಮತ್ತೊಂದು ಮಹತ್ವದ ಅಧ್ಯಾಯವನ್ನೇ ರಚಿಸಿದೆ.

 

ಬಾಹ್ಯಾಕಾಶದಲ್ಲಿ ಅತ್ಯಧಿಕ ಸಮಯ ಕಳೆದ ಮಹಿಳೆ ಎಂಬ ಐತಿಹಾಸಿಕ ದಾಖಲೆಯನ್ನು ಸುನಿತಾ ವಿಲಿಯಮ್ಸ್ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಮೂಲತಃ ಭಾರತೀಯರ ಪರಂಪರೆಯಾದರೂ, ಅಮೇರಿಕಾದ ಖ್ಯಾತ ಗಗನಯಾತ್ರಿಯಾಗಿ ಅವರು ವೈಜ್ಞಾನಿಕ ಕ್ಷೇತ್ರದಲ್ಲಿ ಅಪರೂಪದ ಸಾಧನೆಗಳನ್ನು ಮಾಡಿದ್ದಾರೆ. 

 

 ಒಂದು ವಾರದ ಸಂಶೋಧನೆಗಾಗಿ ತೆರಳಿದ ಈ ತಂಡವು ಅನಿರೀಕ್ಷಿತ ತಾಂತ್ರಿಕ ದೋಷಗಳ ಕಾರಣದಿಂದ ಒಂಭತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಉಳಿಯುವಂತಾಯಿತು. ಆದರೆ ಅವಧಿಯಲ್ಲಿ ಒಂಬೈನೂರು ಗಂಟೆಗಳ ಸಂಶೋಧನೆ ನಡೆಸಿದ ಅವರು, ಭವಿಷ್ಯದ ಬಾಹ್ಯಾಕಾಶ ಯಾತ್ರೆಗಳಿಗೆ ಅಮೂಲ್ಯ ಮಾಹಿತಿಯನ್ನು ನೀಡಿದ್ದಾರೆ. ಅವರ ಈ ಯಶಸ್ಸು ಭೂಮಿಯಿಂದ ಬಾಹ್ಯಾಕಾಶದವರೆಗೆ ಹೊಸ ದಾರಿಗಳನ್ನು ಮಹತ್ತರ ಪಾತ್ರ ವಹಿಸಲಿದೆ.