ಪೆರ್ಲ: ದೇರಡ್ಕ ಸಮೀಪದ ಸಂಟನಡ್ಕ ನಿವಾಸಿ, ಪಾರಂಪರಿಕ ಕೃಷಿಕ ಬಾಬು ಪೂಜಾರಿ (85) ಅವರು ವಯೋಸಹಜ ಅಸೌಖ್ಯದಿಂದ ಮಂಗಳವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ದಾರಕ್ಕು, ಮಕ್ಕಳು – ಪದ್ಮನಾಭ, ತಿಮ್ಮಣ್ಣ, ಲಕ್ಷ್ಮೀ, ಜಯರಾಮ, ಶಾರದಾ, ರವಿ ಎಸ್.ಎಂ., ಜಯಪ್ರಕಾಶ, ಸೊಸೆಯಂದಿರು – ಊರ್ಮಿಳಾ, ಜಯಂತಿ, ಶಾರದಾ, ಪದ್ಮಾವತಿ, ಸುಜಾತ, ರಮ್ಯ, ಅಳಿಯಂದಿರು – ಆನಂದ ಬೆಜ್ಜ, ದಯಾನಂದ ಮಣಿಯಂಪಾರೆ, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರ ಆತ್ಮಕ್ಕೆ ಭಗವಂತನು ಶಾಶ್ವತ ಶಾಂತಿಯನ್ನು ನೀಡಲಿ. ಓಂ ಶಾಂತಿ.