ಉಡುಪಿ: ಗಾಂಜಾ ಸೇವನೆ ದೃಢ; ಮಣಿಪಾಲದಲ್ಲಿ ಮೂವರು ಯುವಕರ ಬಂಧನ!

  • 20 Mar 2025 12:42:11 PM

ಉಡುಪಿ: ಗಾಂಜಾ ಮತ್ತು ಅಮಲು ಪದಾರ್ಥ ಸೇವನೆಯ ಪ್ರಕರಣದಲ್ಲಿ ಮೂವರು ಯುವಕರನ್ನು ಮಣಿಪಾಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

 

ಉಪೇಂದ್ರ ಪೈ ಸರ್ಕಲ್ ಬಳಿಯ ಮದ್ಯದಂಗಡಿ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಅಮಲಿನ ಸ್ಥಿತಿಯಲ್ಲಿ ಬಿದ್ದಿದ್ದ ಸಾಹಿಲ್ ಮೆಹ್ರಾ (20), ಶೌನಕ್ ಮುಖೋಪಾಧ್ಯಾಯ (19) ಮತ್ತು ವಾಲುಸ್ಟಾ ಮಾರ್ಟಿನ್ಸ್ (20) ಎಂಬ ಮೂವರೂ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಸಾರ್ವಜನಿಕ ಸ್ಥಳದಲ್ಲಿ ಅಮಲು ಪದಾರ್ಥ ಸೇವನೆ ಮಾಡಿದ ಆರೋಪದಡಿಯಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.