ಬಾಯಾರು: ಕಣಿಹಿತ್ತಿಲು ಶ್ರೀ ಮಲರಾಯ ದೈವಸ್ಥಾನದಲ್ಲಿ ಮುಡಿಪು ಪೂಜೆ!; ಜಾತ್ರಾ ಮಹೋತ್ಸವಕ್ಕೆ ಭಕ್ತರ ಸಜ್ಜು!

  • 21 Mar 2025 02:59:33 PM


ಬಾಯಾರು: ಬಂಗೇರ ತರವಾಡು ಕಣಿಹಿತ್ತಿಲು ಶ್ರೀ ಮಲರಾಯ ಧೂಮಾವತಿ ಪಂಜುರ್ಲಿ ನಾಗ ಪರಿವಾರ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಪೂರ್ವಭಾಗವಾಗಿ ಶುಕ್ರವಾರ ಶ್ರೀ ವೆಂಕಟರಮಣ ದೇವರ ಮುಡಿಪು ತಿರುಪತಿಗೆ ಸಮರ್ಪಣೆ ಮಾಡಲು ಮುಡಿಪು ಪೂಜೆ ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿತು.

 

ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಕೊರಗಪ್ಪ ಗುರಸ್ವಾಮಿ ಕಾಸರಗೋಡು, ಸಮಿತಿಯ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು, ಮಾಜಿ ಕಾರ್ಯದರ್ಶಿ ನಾರಾಯಣ ಪೂಜಾರಿ ಕೊರಕ್ಕೊಡು, ದೈವಗಳ ಕರ್ಮಿಯರು ಹಾಗೂ ಕುಟುಂಬದ ಅನೇಕ ಸದಸ್ಯರು ಭಾಗವಹಿಸಿದ್ದರು.

 

ಪ್ರಸ್ತುತ ದೈವಸ್ಥಾನದ ವಾರ್ಷಿಕ ಜಾತ್ರೆಯು ಎಪ್ರಿಲ್ 10 ಹಾಗೂ 11 ರಂದು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಲಿದೆ ಎಂದು ಆಡಳಿತ ಸಮಿತಿ ಮಾಹಿತಿ ನೀಡಿದೆ.