ಮಲ್ಪೆ: ಮಲ್ಪೆ ಬಂದರಿನಲ್ಲಿ ಮಹಿಳೆಯೋರ್ವಳು ಮೀನು ಕದ್ದ ಮಹಿಳೆಗೆ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಿದುದರ ವಿರುದ್ಧ ಮೀನುಗಾರರ ಸಂಘ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಬಂಧಿತರನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಾಳೆ ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ ಬಂದರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಮೀನುಗಾರರ ಸಂಘದ ಆಕ್ರೋಶ:
ಮೀನುಗಾರರ ಮೇಲೆ ಸುಳ್ಳು ಆರೋಪ ಮಾಡಿ, ಒಬ್ಬರ ತಪ್ಪಿಗೆ ನಾಲ್ವರನ್ನು ಬಂಧಿಸಿ ಅವರ ಮೇಲೆ ಗಂಭೀರ ಪ್ರಕರಣಗಳನ್ನು ದಾಖಲಿಸಿರುವುದು ಪೊಲೀಸ್ ಇಲಾಖೆಯ ಈ ಕೆಲಸ ನ್ಯಾಯವಾದದ್ದಲ್ಲ ಎಂದೂ ಸುಮಾರು 15 ಸಾವಿರ ರೂ. ಮೌಲ್ಯದ ಸಿಗಡಿ ಮೀನು ಕದ್ದ ಮಹಿಳೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ನಿಷ್ಕಲಂಕ ಮೀನುಗಾರರನ್ನು ಬಂಧಿಸಿರುವುದು ನ್ಯಾಯೋಚಿತವೇ? ಈ ತಾರತಮ್ಯ ಸರಿಯೇ ಎಂದು ಪ್ರಶ್ನಿಸಿದ್ದಾರೆ! ಈ ಪ್ರಕರಣದ ವಿರುದ್ಧ ಪ್ರತಿಯೊಬ್ಬ ಮೀನುಗಾರನೂ ಧ್ವನಿ ಎತ್ತಬೇಕು” ಎಂದು ಸಂಘ ಮನವಿ ಮಾಡಿದೆ.
ಪ್ರತಿಷ್ಠಿತ ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಮಲ್ಪೆ ಬಂದರಿಯ ಎಲ್ಲಾ ಮೀನುಗಾರರು, ಭೋಟಿನವರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಭಜನಾ ಮಂಡಳಿ, ಮಹಿಳಾ ಮಂಡಳಿ ಹಾಗೂ ಕರಾವಳಿಯ ಎಲ್ಲ ಸಮುದಾಯದ ಜನರು ಭಾಗವಹಿಸಲಿದ್ದಾರೆ ಎಂದೂ ಬಂದರಿನೆದುರು ನಿಂತು ದುಡಿಯುವ ಪ್ರತಿಯೊಬ್ಬರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಸಂಘ ಮನವಿ ಮಾಡಿಕೊಂಡಿದ್ದಾರೆ.