ಬೆಂಗಳೂರು: ಹೆಣ್ಣೂರು ಪ್ರದೇಶದಲ್ಲಿನ ವೃದ್ಧೆಯ ಆರೈಕೆಗೆಂದು ಕೆಲಸಕ್ಕೆ ಬಂದ ಮಹಿಳೆಯೋರ್ವಳು 20 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ. ಆಂಧ್ರಪ್ರದೇಶ ಮೂಲದ ಸೋನಿಯಾ ಮತ್ತು ಆಕೆಯ ಪತಿ ಪ್ರದೀಪ್ ಈ ಕೃತ್ಯವನ್ನು ಎಸಗಿದ್ದು, ಹೆಣ್ಣೂರು ಪೊಲೀಸರು ಅವರನ್ನು ಬಂಧಿಸಿದ್ದಾರೆ.
2024ರ ಡಿಸೆಂಬರ್ 31ರಂದು ಸೋನಿಯಾ ವೃದ್ಧೆಯನ್ನು ನೋಡಿಕೊಳ್ಳಲು ಕೆಲಸಕ್ಕೆ ಸೇರಿಕೊಂಡಿದ್ದರು. ಆದಈ ಕೆಲಸಕ್ಕೆ ಸೇರಿ ಹತ್ತೇ ದಿನದಲ್ಲಿ ಯಾವುದೇ ಮುನ್ಸೂಚನೆಯಿಲ್ಲದೆ ಮನೆ ಬಿಟ್ಟು ನಾಪತ್ತೆಯಾಗಿದ್ದಳು.
ಮನೆಮಂದಿ ಮೊದಲಿಗೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಲವು ಭಾರಿ ಕರೆ ಮಾಡಿದರು ಸಿಕ್ಕದೆ ಹೋದಲ್ಲಿ ಅನುಮಾನಗೊಂಡು ಮನೆ ಪರಿಶೀಲಿಸಿದಾಗ ವಜ್ರಾಭರಣ ಸೇರಿದಂತೆ 20 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವಸ್ತುಗಳು ಕಳವಾಗಿರುವುದು ಗಮನಕ್ಕೆ ಬಂದು ತಕ್ಷಣವೇ ಈ ಕುರಿತು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರ ತನಿಖೆಯಲ್ಲಿ ಸೋನಿಯಾ ಮತ್ತು ಪ್ರದೀಪ್ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂತು. ಪೊಲೀಸರು ಕಾರ್ಯಾಚರಣೆ ನಡೆಸಿ ದಂಪತಿಯನ್ನು ಬಂಧಿಸಿ, ಕಳವು ಮಾಡಿದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಕಳವುಗೊಂಡ ಚಿನ್ನವನ್ನು ಆಂಧ್ರದ ಜ್ಯುವೆಲ್ಲರಿ ಅಂಗಡಿಗೆ ಮಾರಾಟ ಮಾಡಲಾಗಿತ್ತು. ಆದರೆ, ಪೊಲೀಸರು ಸರಿಯಾಗಿ ಹಂಚಿಕೊಂಡ ಪುರಾವೆಗಳನ್ನು ಆಧರಿಸಿ ಚಿನ್ನವನ್ನು ವಶಪಡಿಸಿಕೊಂಡು ದಂಪತಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ.