ಇಂದು ತುಳುನಾಡಿಗೆ ಬಾಬಾ ಶ್ರೀ ವಿಠ್ಠಲ್ ಗಿರಿ ಮಹಾರಾಜರ ಆಗಮನ; ಬೆಳ್ತಂಗಡಿಯಲ್ಲಿ ಭಾನುವಾರ ನಾಗಸಧುಗಳ ಉಪಸ್ಥಿತಿಯಲ್ಲಿ 8ನೇ ಆಸರೆ ಮನೆ ಹಸ್ತಾಂತರ!

  • 22 Mar 2025 03:51:28 PM

ಮಂಗಳೂರು: ತುಳು ನಾಡಿನ ಜನ್ಮಭೂಮಿಗೆ ನಾಗಸಾಧು ತಪೋನಿಧಿ ಬಾಬಾ ಶ್ರೀ ವಿಠ್ಠಲ್ ಗಿರಿ ಮಹಾರಾಜ್ ಇಂದು ಬೆಳಿಗ್ಗೆ ಮಂಗಳೂರಿಗೆ ಆಗಮಿಸಿದ್ದಾರೆ. ಭಾನುವಾರ ಬೆಳ್ತಂಗಡಿಯಲ್ಲಿ ನಡೆಯಲಿರುವ ವೀರಕೇಸರಿ ಬೆಳ್ತಂಗಡಿ ಸಂಘಟನೆಯ 200ನೇ ಯೋಜನೆಯ 8ನೇ ಆಸರೆ ಮನೆ ಹಸ್ತಾಂತರ ಸಭಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. 

 

ಈ ಮಹತ್ವದ ಕಾರ್ಯಕ್ರಮವು ಸಮಾಜ ಸೇವೆಯ ಪರಿಕಲ್ಪನೆಯನ್ನು ಉತ್ತೇಜಿಸುವಂತಾಗಿದ್ದು, ನಾಗ ಸಾಧು ತಪೋನಿಧಿ ಬಾಬಾ ಶ್ರೀ ವಿಠ್ಠಲ್ ಗಿರಿ ಮಹಾರಾಜ್ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಮಹತ್ತ್ವ ನೀಡಲಿದೆ.

 

ಈ ಸಂದರ್ಭದಲ್ಲಿ ಅವರು ಇನ್ನಷ್ಟು ಧಾರ್ಮಿಕ ಹಾಗೂ ಸಾಮಾಜಿಕ ಸಭೆಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅವರ ಭೇಟಿಯಿಂದ ಭಕ್ತರು ಹಾಗೂ ಸಂಘಟನಾ ಕಾರ್ಯಕರ್ತರಿಗೆ ಸ್ಫೂರ್ತಿ ಲಭಿಸುವುದು ಖಚಿತ. ಈ ಕುರಿತಾಗಿ ಹೆಚ್ಚಿನ ಮಾಹಿತಿ ಬೇಕಾದಲ್ಲಿ ವೀರಕೇಸರಿ ಬೆಳ್ತಂಗಡಿ ಸಂಘಟನೆಯ ಪದ್ಮನಾಭ ಪೂಜಾರಿಯನ್ನು ಸಂಪರ್ಕಿಸಬಹುದು.