ಮಲ್ಪೆ: ಮಲ್ಪೆ ಬಂದರಿನಲ್ಲಿ ಇಂದು ನಡೆದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಉದ್ರೇಕ ಭಾಷಣ ಮಾಡಿದ್ದಾರೆ ಎನ್ನೋ ಆರೋಪ ಕೇಳಿ ಬರುತ್ತಿದ್ದು ಇದು ಸಾರ್ವಜನಿಕರನ್ನು ಪ್ರಚೋದಿಸುವ ಮತ್ತು ಅಪರಾಧಕ್ಕೆ ಪ್ರೇರೇಪಿಸುವಂತಾಗಿದೆ ಎಂಬ ಕಾರಣಕ್ಕೆ ಮಲ್ಪೆ ಪೊಲೀಸರು ಇವರ ಮೇಲೆ ಸುಮೋಟೋ ಕೇಸ್ ದಾಖಲಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಮಧ್ವರಾಜ್ ಅವರು ನಮ್ಮ ಮನೆಗೆ ಕಳ್ಳರು ಬಂದರೆ ನಾವು ಏನು ಮಾಡುತ್ತೇವೆ? ಪೊಲೀಸರು ಬರುವುದಕ್ಕೆ ತಡವಾದರೆ ಕಳ್ಳರನ್ನು ಕಟ್ಟಿ ಹಾಕಲೇಬೇಕಾಗುತ್ತದೆ ಅಲ್ವಾ ಅದಲ್ಲದೆ ಇನ್ನೇನು ಮಾಡಲು ಸಾಧ್ಯ?? ಎಂದೂ ಹೊಡೆದದ್ದು ಯಾರಿಗೆ ತಪ್ಪಿತಸ್ಥನಿಗೆ ತಾನೇ??ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದು ಸಾರ್ವಜನಿಕವಾಗಿ ಆ ಮಹಿಳೆಗೆ ಹೊಡೆದುದಕ್ಕೆ ಸಮರ್ಥನೆಯಾಗಿ ಮಾತನಾಡಿದ್ದಾರೆ ಎಂಬುದಾಗಿ ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2025 ಅಡಿಯಲ್ಲಿ BNS ಸೆಕ್ಷನ್ 191(1) ಮತ್ತು 192 ಅನ್ವಯ ಪ್ರಕರಣ ದಾಖಲಿಸಲಾಗಿದೆ.