ಮೊಬೈಲ್ ಚಾಟ್: ಸಿಕ್ಕಿಬಿದ್ದ ಅನ್ಯ ಮತೀಯ ಅಪ್ರಾಪ್ತ ಯುವಕನಿಗೆ ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ

  • 02 Nov 2024 08:10:38 PM


ಸುಳ್ಯ: ಮೊಬೈಲ್ ಬಳಕೆಯ ವಿರುದ್ಧ ಎಷ್ಟೇ ಎಚ್ಚರಿಕೆ ನೀಡಿದರೂ, ಯುವಜನರ ನಡವಳಿಕೆಯಲ್ಲಿ ಬದಲಾವಣೆ ಕಂಡು ಬರಲಿಲ್ಲ ಎನ್ನುವುದಕ್ಕೆ ಎಲಿಮಲೆ ಗ್ರಾಮದಲ್ಲಿ ನಡೆದ ಈ ಅಹಿತಕರ ಘಟನೆ ಸಾಕ್ಷಿಯಾಗಿದೆ.

 

ಸುಳ್ಯದ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಎಲಿಮಲೆಯ ಹತ್ತನೇ ತರಗತಿ ಅಪ್ರಾಪ್ತ ಹಿಂದೂ ಹುಡುಗಿ ಜೊತೆ ಮೊಬೈಲ್ ನಲ್ಲಿ ಚಾಟ್ ಮಾಡಿ ಸಿಕ್ಕಿಬಿದ್ದಿದ್ದಾನೆ.ಈ ವಿಷಯ ಕೆಲವರ ಗಮನಕ್ಕೆ ಬಂದು ಆತನನ್ನು ಗುರುತು ಹಿಡಿದು ವಿಚಾರಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

 

ಈ ಘಟನೆಯಲ್ಲಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಹಾಗೂ ಪೋಷಕರಲ್ಲಿ ಈ ಘಟನೆಯಿಂದಾಗಿ ಆತಂಕ ಉಂಟು ಮಾಡಿದ್ದು, ಪೋಷಕರಿಗೆ ಮಕ್ಕಳ ಮೊಬೈಲ್ ಬಳಕೆಯ ಮೇಲಿನ ಕಡ್ಡಾಯ ನಿಗಾವಹಿಸುವಂತೆ ಮನವಿ ಮಾಡಲಾಗಿದೆ. ಪೊಲೀಸರು ಈ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿ, ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

 

ಪೋಷಕರಿಗೆ ಹಿಂದೂ ಕಾರ್ಯಕರ್ತರ ಕಿವಿಮಾತು: ಮೊಬೈಲ್ ನಲ್ಲಿ ಎಷ್ಟು ಒಳ್ಳೆಯ ವಿಚಾರಗಳಿವಿವೆಯೋ ಅಷ್ಟೇ ಕೆಟ್ಟ ವಿಚಾರಗಳು ಇದೆ ಅನ್ನೋ ವಿಚಾರ ನೆನಪಿನಲ್ಲಿಟ್ಟುಕೊಂಡು ನಿಮ್ಮ ಮಕ್ಕಳ ಮೊಬೈಲ್ ಬಳಕೆಯ ಮೇಲೆ ಗಮನಹರಿಸಿ.*ಜಾಗರೂಕತೆ ಬರೀ ಹೆಣ್ಣು ಮಕ್ಕಳ ಮೇಲಲ್ಲ ಗಂಡು ಮಕ್ಕಳ ಮೇಲೆಯೂ ಇರಲಿ* ಇಂತಹ ಇನ್ನೊಂದು ಅನಾಹುತ ಇನ್ನು ಬಾರದಿರಲಿ.*ಇಲ್ಲವಾದಲ್ಲಿ ಕೆಟ್ಟಮೇಲೆ ಬುದ್ಧಿ ಬರುವುದು ಎನ್ನೋ ಮಾತಿಗೆ ಪಶ್ಚಾತಪಿಸುವ ಸಮಯಕೂಡ ಸಿಗದೇ ಹೋಗಬಹುದು*.