ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ವಿಳಂಬ – ಏಪ್ರಿಲ್ 1ರಂದು ಬೃಹತ್ ಪ್ರತಿಭಟನೆ!

  • 25 Mar 2025 02:40:21 PM

ಉಡುಪಿ: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ವಿಳಂಬಗೊಳ್ಳುತ್ತಿರುವುದಕ್ಕೆ ಪ್ರತಿಭಟನೆಗೆ ಆಹ್ವಾನ ನೀಡಲಾಗಿದೆ..

 

 ಏಪ್ರಿಲ್ 1ರಂದು ಮಧ್ಯಾಹ್ನ 2.30ಕ್ಕೆ ಕಲ್ಸಂಕದಿಂದ ಇಂದ್ರಾಳಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.

 

ಇಂದು ಪ್ರತಿಭಟನಾ ಮೆರವಣಿಗೆಯ ಮತ್ತು ಏಪ್ರಿಲ್ ಫೂಲ್ ದಿನಾಚರಣೆಯ ಸಲುವಾಗಿ ಇಂದ್ರಾಳಿಯಲ್ಲಿ ಸ್ಟಿಕರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. 

 

ಉಡುಪಿ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಕಾರಿಗೆ ಸ್ಟಿಕರ್ ಅಂಟಿಸುವುದರ ಮೂಲಕ ಹೋರಾಟದ ಬಗ್ಗೆ ಜಾಗೃತಿ ಮೂಡಿಸಿದರು.

 

ಈ ಪ್ರತಿಭಟನಾ ಮೆರವಣಿಗೆಯಲ್ಲಿ ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಕೀರ್ತಿ ಶೆಟ್ಟಿ ಅಂಬಲಪಾಡಿ, ಪ್ರಧಾನ ಸಂಚಾಲಕ ಅಮೃತ್ ಶೆಣೈ, ಕರ್ಜೆ ಮಾಜಿ ಪಂಚಾಯತ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಉಪಾಧ್ಯಕ್ಷ ಮಹಾಬಲ ಕುಂದರ್, ಸದಸ್ಯರು ಚಾರ್ಲ್ಸ್ ಅಂಬ್ಲರ್, ರಹಿಮಾನ್, ಅನ್ಸರ್, ಭರತ್ ಕುಮಾರ್, ಸಾಯಿರಾಜ್, ಸಂಜಯ್ ಆಚಾರ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.