ವಾಹನ ನಿಲ್ಲಿಸುವ ವಿಚಾರ ಗಲಾಟೆಗೆ ತಿರುಗಿ – ಮಹಿಳೆಯ ಮೇಲೆ ಹಲ್ಲೆ FIR ದಾಖಲು; ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಗೆ ದಾಖಲು!

  • 26 Mar 2025 04:49:29 PM

ಸುಳ್ಯ: ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಮತ್ತು ಬಾಡಿಗೆದಾರನ ನಡುವೆ ಉಂಟಾದ ವಾಗ್ವಾದವು ಹಲ್ಲೆಗೆ ತಿರುಗಿದ ಘಟನೆ ನಿನ್ನೆ ಸಂಭವಿಸಿದೆ. ಶರೀಫ್ ಸದಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಯ ಮನೆಯ ಗೇಟ್ ಎದುರು ವಾಹನ ನಿಲ್ಲಿಸುತ್ತಿದ್ದು, ಈ ಕಾರಣದಿಂದಾಗಿ ಇವರ ಮಧ್ಯೆ ಮೂರು-ನಾಲ್ಕು ತಿಂಗಳಿನಿಂದ ಮಾತಿನ ಚಕಾಮಕಿ ನಡೆಯುತ್ತಿತ್ತು.

 

ನಿನ್ನೆ, ಮನೆಯಲ್ಲಿಯರು ಇಲ್ಲದ ಸಂದರ್ಭದಲ್ಲಿ, ಶರೀಫ್ ತಮ್ಮ ಕಾರನ್ನು ಮತ್ತೆ ಗೇಟ್ ಮುಂಭಾಗ ನಿಲ್ಲಿಸಿದಾಗ, ಬಾಡಿಗೆದಾರರು ಅದನ್ನು ಸ್ವಲ್ಪ ಸೈಡಿಗೆ ಸರಿಸಲು ಕೇಳಿ ಕೊಂಡಾಗ ಶರೀಫ್ ಈ ವಿಷಯದ ಮೇಲೆ ವಾಗ್ವಾದ ಉಲ್ಬಣಗೊಂಡು, ಆಕ್ರೋಶಗೊಂಡ ಶರೀಫ್ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಯಿಂದ ಮಹಿಳೆಯ ಕಿವಿಗೆ ಗಂಭೀರವಾಗಿ ಗಾಯಗೊಂದು ಬಾಡಿಗೆದಾರರ ಮಹಿಳೆ ಚಂದ್ರಿಕಾ ಕಿವಿಯಲ್ಲಿ ರಕ್ತ ಹೆಪ್ಪುಗಟ್ಟಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಈ ಕುರಿತು ಪೊಲೀಸರು ದೂರು ಸ್ವೀಕರಿಸಿದ್ದು, ಶರೀಫ್ ವಿರುದ್ಧ FIR ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರೆದಿದ್ದು, ನ್ಯಾಯೋಚಿತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.