ಮೈ ಬಣ್ಣ, ಭಾಷೆ ಕಾರಣವಾಗಿ ಹಿಂಸೆ ; ನವ ವಿವಾಹಿತೆ ಆತ್ಮಹತ್ಯೆ!

  • 27 Mar 2025 09:20:25 AM

ಮಲಪ್ಪುರಂ: ಪತಿ ಹಾಗೂ ಆತನ ಮನೆಯವರು ನಿರಂತರವಾಗಿ ವರ್ಣನಿಂದನೆ ಮಾಡಿದ್ದು, ಮಾನಸಿಕ ಹಿಂಸೆ ಒಳಪಟ್ಟಿದ್ದ ನವ ವಿವಾಹಿತೆ ಶಹಾನ ಮುಮ್ತಾಸ್ (19) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಕಳೆದ ವರ್ಷದ ಮೇ 27ರಂದು ವಿವಾಹವಾಗಿದ್ದರು. ಕುಟುಂಬಸ್ಥರ ಹೇಳಿಕೆಯ ಪ್ರಕಾರ, ಅವರ ಮೈ ಬಣ್ಣದ ಕುರಿತು ನಿಂದನೆ ಮತ್ತು ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂಬ ಕಾರಣದಿಂದ ಹಿಂಸೆ ಎದುರಿಸಬೇಕಾಯಿತು ಎಂದು ತಿಳಿದು ಬಂದಿದೆ.

 

ಮೃತಳ ಪತಿ ಮತ್ತು ಅವರ ಮನೆಯವರು ಈ ಕಾರಣಗಳಿಂದ ವಿಚ್ಛೇದನಕ್ಕಾಗಿ ಒತ್ತಾಯಿಸುತ್ತಿದ್ದರೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಮಾನಸಿಕ ಹಿಂಸೆ ತಾಳಲಾರದೆ ಶಾಹನ ಮುಮ್ತಾಸ್ ಇಂತಹ ತೀರ್ಮಾನ ಕೈಗೊಂಡಿದ್ದಾಳೆ ಎಂದು ಅವರ ತಂದೆ ಮತ್ತು ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಂತ್ರಸ್ತೆಯ ಪತಿ ಮತ್ತು ಅವರ ಮನೆಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಪ್ರಾರಂಭಿಸಿದ್ದಾರೆ. ಮಹಿಳೆಯ ಆತ್ಮಹತ್ಯೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.