ಹಿಂದೂ ವ್ಯಾಪಾರಸ್ಥರಿಗೆ ಪುನರ್‌ಜೀವನ – ಪುತ್ತೂರು ಮಾಲಿಂಗೇಶ್ವರ ದೇವಾಲಯದ ನಿರ್ಧಾರಕ್ಕೆ ಸನಾತನ ಹಿಂದು ವ್ಯಾಪಾರಸ್ಥರ ಸಂಘದ ಸ್ವಾಗತ!

  • 27 Mar 2025 02:16:57 PM

ಪುತ್ತೂರು: ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಕಳೆದ ಕೆಲವು ವರ್ಷಗಳಿಂದ ಹಿಂದೂ ಧಾರ್ಮಿಕ ಕೇಂದ್ರವಾಗುತ್ತುಕೊಂಡು ಹಲವು ಧಾರ್ಮಿಕ ಆಚಾರ-ವಿಚಾರಗಳಿಗೆ ಪ್ರೇರಣೆಯಾಗಿದೆ.

 

ಈ ಬಾರಿ ದೇವಸ್ಥಾನದ ಆಡಳಿತ ಮಂಡಳಿ ಮಹತ್ವದ ನಿರ್ಧಾರವನ್ನು ಕೈಗೊಂಡು, ರಾಜಕೀಯವನ್ನು ಬದಿ ಗಿಟ್ಟು, ಸನಾತನ ಧರ್ಮದ ಸಾರವನ್ನು ಎತ್ತಿಹಿಡಿಯಲು ಮತ್ತು ಹಿಂದೂ ವ್ಯಾಪಾರಸ್ಥರಿಗೆ ಮತ್ತೊಮ್ಮೆ ಅವಕಾಶ ನೀಡಲು 

 

ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ, ದಕ್ಷಿಣ ಕನ್ನಡ ಜಿಲ್ಲೆ (ರಿಜಿಸ್ಟರ್ಡ್) ಈ ಮಹತ್ವದ ನಿರ್ಧಾರವನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಹಿಂದೂ ವ್ಯಾಪಾರಸ್ಥರಿಗೆ ಆದ್ಯತೆ ನೀಡುವುದು, ಧರ್ಮದ ಪರಂಪರೆಯನ್ನು ಬಲಪಡಿಸುವಂತೆ ಮಾಡುವುದು ಅತ್ಯಗತ್ಯ. 

 

ಇದೇ ಆದರ್ಶವನ್ನು ಎಲ್ಲಾ ದೇವಸ್ಥಾನಗಳು ಅನುಸರಿಸಬೇಕು ಎಂಬುದು ನಮ್ಮ ಸಂಘದ ಆಶಯ. ಸನಾತನ ಹಿಂದೂ ಧರ್ಮದ ರಕ್ಷಣೆ ಮತ್ತು ಪ್ರಚಾರ ನಮ್ಮೆಲ್ಲರ ಕರ್ತವ್ಯ.

 

ಭವಿಷ್ಯದಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ವ್ಯಾಪಾರ-ವ್ಯವಹಾರಗಳಿಗೆ ಹಿಂದೂ ವ್ಯಾಪಾರಸ್ಥರಿಗೆ ಹೆಚ್ಚಿನ ಆದ್ಯತೆ ದೊರೆಯುವಂತೆ ನಾವು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ. - ಅಧ್ಯಕ್ಷರು, ಜಯರಾಮ ಶೆಟ್ಟಿಗಾರ್, ಕಲ್ಲಡ್ಕ.