ಉತ್ತರ ಕನ್ನಡ: ಉತ್ತರ ಕನ್ನಡದ ಶಿರಸಿಯಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಪತ್ನಿ ಶೋಭಾ ಹೊಸಬಾಳೆ ಅಡಿಕೆ ಸುಳಿಯುವ ಯಂತ್ರಕ್ಕೆ ಸಿಲುಕಿ ದುರ್ಮರಣ ಹೊಂದಿರುವ ಭೀಕರ ಘಟನೆ ನಡೆದಿದೆ.
ಶೋಭಾ ಹೊಸಬಾಳೆ ಅವರು ಮನೆಯ ಅಡಿಕೆ ತೆಗೆಯುವ ಕೆಲಸ ವೀಕ್ಷಿಸಲು ಹೋದ ಸಮಯದಲ್ಲಿ ದುರದೃಷ್ಟವಾತ್ ಅವರ ಸೀರೆ ಯಂತ್ರಕ್ಕೆ ಸಿಲುಕಿಕೊಂಡು ಯಂತ್ರ ಬಲದಿಂದ ಎಳೆದೊಯ್ದು ಅವರನ್ನು ಎತ್ತಿ ಬಿಸಾಕಿ ತೀವ್ರ ಗಾಯಗೊಂಡ ಅವರು ಭಾರೀ ರಕ್ತಸ್ರಾವದಿಂದ ಕೊನೆಯುಸಿರೆಳೆದರು.
ಈ ದುರ್ಘಟನೆ ಶಿರಸಿ ಮತ್ತು ಅದರ ಸುತ್ತಮುತ್ತಲಿನ ಜನತೆಯಲ್ಲಿ ತೀವ್ರ ನೋವನ್ನುಂಟು ಮಾಡಿದೆ.