ಬೆಳ್ತಂಗಡಿ: ಪೂಜ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ವೀರಕೇಸರಿ ಬೆಳ್ತಂಗಡಿ ತಂಡದ 8ನೇ ಆಸೆರೆ ಮನೆ ಯಶಸ್ವಿಯಾಗಿ ಹಸ್ತಾಂತರ!

  • 27 Mar 2025 03:47:22 PM

ಬೆಳ್ತಂಗಡಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಕೇಸರಿ ಬೆಳ್ತಂಗಡಿ ತಂಡ ತನ್ನ 200ನೇ ಮಹತ್ವಾಕಾಂಕ್ಷಿ ಯೋಜನೆಯಾದ 8ನೇ ಆಸರೆ ಮನೆ ಹಸ್ತಾಂತರವನ್ನು ಮಾರ್ಚ್ 23, ಭಾನುವಾರದಂದು ವಿಜೃಂಭಣೆಯಿಂದ ನಡೆಸಿತು.

 

 ಉದಯ ಗುಡಿಗಾರ್ ಅವರಿಗೆ ಕಲ್ಮಂಜ ಗ್ರಾಮದ ಅಂತರ ಬೈಲು ಪಾದೆಮೇಲು ಎಂಬ ಪ್ರದೇಶದಲ್ಲಿ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸತ್ಯನಾರಾಯಣ ಪೂಜೆ, ಗಣಹೋಮ ಮತ್ತು ಗೃಹ ಪ್ರವೇಶ ಕಾರ್ಯಕ್ರಮಗಳು ನೆರವೇರಿದವು.

 

ಈ ವಿಶೇಷ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ನಾಗಸಾಧು ತಪೋನಿಧಿ ಬಾಬಾ ಶ್ರೀ ವಿಠ್ಠಲ್ ಗಿರಿ ಜಿ ಮಹಾರಾಜ್ ಮತ್ತು ಪರಮ ಪೂಜ್ಯ ಅಘೋರಿ ಶ್ರೀ ಭಾರ್ಗವ್ ರಾಮ್ ಜೀ ಮಹಾರಾಜ್ ಅವರ ದಿವ್ಯ ಹಸ್ತದಿಂದ ಮನೆ ಹಸ್ತಾಂತರ ಮಾಡಲಾಯಿತು.

 

 ಈ ಜೊತೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉದ್ಯಮಿ ಕೆ. ಮೋಹನ್ ಕುಮಾರ್, ಕಿರಣ್ ಚಂದ್ರ ಡಿ ಪುಷ್ಪಗಿರಿ, ಅರ್ಜುನ್ ಭಂಡಾರ್ಕರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ, ರಾಷ್ಟ್ರೀಯ ತುಳು ಗುಡಿಗಾರ ಸಂಘದ ಅಧ್ಯಕ್ಷ ರವೀಂದ್ರ ಗುಡಿಗಾರ್, ವಿಶ್ವ ಪಾಂಡವರ ಸೇನೆ ಬೆಂಗಳೂರಿನ ರಾಮು BTN, ಲೆಕ್ಕ ಪರಿಶೋಧಕರು ಕೃಷ್ಣಮೂರ್ತಿ, ಗೌರವಾಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಸಮಾಜ ಸೇವಕರು ಪ್ರಭಾಕರ್ ಸಿ.ಜಿ., ಹರ್ಷೇಂದ್ರ ಗುಡಿಗಾರ್, ಪ್ರವೀಣ್ ಫೆರ್ನಾಂಡಿಸ್, ಹರೀಶ್ ಸುವರ್ಣ, ಶ್ರೀರಾಮ ಅರ್ಥ್ ಮೂವರ್ಸ್ ಕನ್ಯಾಡಿಯ ಸುನಿಲ್, ತ್ರಿಶೂಲ್ ಎಲೆಕ್ಟ್ರಾನಿಕ್ಸ್ ಉಜಿರೆಯ ರಾಜೇಶ್ ಕೆ, ಪವರ್ ಆನ್ ಬೆಳ್ತಂಗಡಿಯ ಶೀತಲ್ ಜೈನ್, ಸಂಘಟಕರು ಪದ್ಮನಾಭ ಪೂಜಾರಿ, ಸದಸ್ಯರು ಹಾಗೂ ಊರಿನ ಜನತೆ ಉಪಸ್ಥಿತರಿದ್ದರು.

 

ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯದೊಂದಿಗೆ ಮುನ್ನುಗ್ಗುತ್ತಿರುವ ವೀರಕೇಸರಿ ಬೆಳ್ತಂಗಡಿ ತಂಡ ಈ ಮೂಲಕ ಆರಂಭಿಸಿದ 8ನೇ ಆಶ್ರಯ ಮನೆ ಯೋಜನೆ ಯಶಸ್ವಿಯಾಗಿ ಪೂರ್ತಿಗೊಂಡಿದೆ.

 

ಈ ಭವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ತಂಡದ ಸದಸ್ಯರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಸ್ತಾಂತರ ಸಮಾರಂಭಕ್ಕೆ ಸಾಕ್ಷಿಯಾದರು. ಈ ಮನೆಯನ್ನು ಪಡೆದ ಉದಯ ಗುಡಿಗಾರ್ ಮತ್ತು ಅವರ ಕುಟುಂಬ ವೀರಕೇಸರಿ ತಂಡದ ಈ ಮಾನವೀಯ ಸೇವೆಗೆ ಕೃತಜ್ಞತೆ ಸಲ್ಲಿಸಿದರು.