ಸುಳ್ಯ : ಸುಳ್ಯತಾಲೂಕಿನ ನಾವೂರು ಗ್ರಾಮದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಚಂದ್ರಿಕಾ ಎಂಬ ಮಹಿಳೆಯ ಮೇಲೆ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ನಡೆದಿದೆ. ಬಾಡಿಗೆ ಮನೆ ಮುಂದೆ ಕಾರು ಪಾರ್ಕಿಂಗ್ ವಿಚಾರವಾಗಿ ನಡೆದ ವಾಗ್ವಾದವು ಹಿಂಸಾಚಾರದ ಮಟ್ಟಕ್ಕೆ ತಲುಪಿದ್ದು, ಚಂದ್ರಿಕಾ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಹಲ್ಲೆಯ ಪರಿಣಾಮವಾಗಿ ಅವರ ಕಿವಿಗೆ ಭಾರೀ ಪೆಟ್ಟು ಬಿದ್ದು, ಒಳಗಿನಿಂದ ರಕ್ತಸ್ರಾವ (Blood Clot) ಉಂಟಾಗಿದೆ. ಮಹಿಳೆಯ ಮೇಲೆ ನಡೆದ ಈ ದೌರ್ಜನ್ಯಕ್ಕೆವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ತೀವ್ರವಾಗಿ ಖಂಡಿಸುತ್ತವೆ.
ಈ ಘಟನೆ ಸಂಭದಿಸಿ FIR ದಾಖಲಾಗಿದ್ದು, 24 ಗಂಟೆಗಳು ಕಳೆದರೂ ಪೊಲೀಸರು ಆರೋಪಿಯನ್ನು ಬಂಧಿಸದೇ ಇರುವುದು ನ್ಯಾಯಸಂಗತವಲ್ಲ. ಮಹಿಳೆಯ ಸುರಕ್ಷತೆ ಮತ್ತು ನ್ಯಾಯಕ್ಕಾಗಿ ಪೊಲೀಸ್ ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಆರೋಪಿಯನ್ನು ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಒತ್ತಾಯಿಸಿದೆ.
ಕ್ರಮ ಕೈಗೊಳ್ಳುವುದರಲ್ಲಿ ಪೊಲೀಸರು ವಿಳಂಬ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಸುಳ್ಯ ಪ್ರಖಂಡ ಎಚ್ಚರಿಕೆ ನೀಡಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದೆ.