ಪುತ್ತೂರು: ಸಂಪ್ಯದಮೂಲೆಯಲ್ಲಿ ತಲ್ವಾರ್ ಭೀತಿ: ಮಹಿಳೆಗೆ ಹಲ್ಲೆಗೆ ಯತ್ನ, ಅವಾಚ್ಯ ಶಬ್ದಗಳಿಂದ ನಿಂದನೆ!

  • 28 Mar 2025 08:43:44 AM

ಪುತ್ತೂರು : ಪುತ್ತೂರಿನ ಸಂಪ್ಯದಮೂಲೆ ಗ್ರಾಮದಲ್ಲಿ ತಲ್ವಾರ್ ಹಿಡಿದು ಹಲ್ಲೆಗೆ ಯತ್ನಿಸಿದ ಘಟನೆ ಸಂಭವಿಸಿದ್ದು , ಇದು ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ.

 

ಕೃಷಿಕ ರೇಖಾನಾಥ್ ರೈ ಅವರ ಸಹೋದರಿ ಪುಷ್ಪಾವತಿ ರೈ ಅವರನ್ನು ಹಸೈನಾರ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಲ್ವಾರ್ ಪ್ರದರ್ಶಿಸಿ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ಘಟನೆಯು ಭಯಾನಕ ಪರಿಸ್ಥಿತಿಯನ್ನು ಉಂಟುಮಾಡಿದೆ.

 

ಸದ್ಯ ಸಂಪ್ಯ ಠಾಣೆ ಗೆ ದೂರು ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.

 

ಈ ಘಟನೆಯು ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ. ಇಂತಹ ಘಟನೆಗಳು ಪುನರಾವೃತವಾಗದಂತೆ ಸಾರ್ವಜನಿಕರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದು ಕೊಳ್ಳಬೇಕಾಗಿ ಬೇಡಿಕೊಂಡಿದ್ದಾರೆ.