ಮಂಗಳೂರು: ಇತ್ತೀಚೆಗಂತೂ ಮಂಗಳೂರಿನಲ್ಲಿ ಅಕ್ರಮ ಗೋಸಾಗಟವು ಮಿತಿಮೀರಿ ನಡೆಯುತ್ತಿದೆ. ಅನ್ನುವುದಕ್ಕೆ ಸಾಕ್ಷಿ ಎಂಬಂತೆ ಇದೀಗ ಮತ್ತೊಂದು ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಮಂಗಳೂರು ಮೂಡುಬಿದರೆ ರಸ್ತೆಯ ಸೂರಲ್ಪಾಡಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿರುವುದರ ಬಗ್ಗೆ ಮಾಹಿತಿ ದೊರೆತ ಹಿಂದೂ ಸಂಘಟನೆಯ ಕಾರ್ಯಕರ್ತರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದರು.
ಆ ಸಂದರ್ಭದಲ್ಲಿ ಅದರಲ್ಲಿ ಕಂಡ ದೃಶ್ಯವು ಅಮಾನುಷವಾಗಿತ್ತು. ಅವುಗಳನ್ನು ಕ್ರೂರವಾಗಿ ಕಟ್ಟಿ ಹಿಂಸಾತ್ಮಕವಾಗಿ ಪಿಕಪ್‌ನ ಟೋಪಿಗೆ ಗೋವುಗಳ ಮುಂಗಾಲನ್ನು ಕಟ್ಟಲಾಗಿತ್ತು.
ಪಿಕಪ್ ನಲ್ಲಿ ಕಟ್ಟಿಹಾಕಿದ್ದ ಗೋವುಗಳ ದೃಶ್ಯವು ಕಂಡವರ ಮನಕಲಕುವ ಹಿಂಸಾತ್ಮಕ ರೀತಿಯಲ್ಲಿತ್ತು ಎನ್ನಲಾಗಿದೆ. ಇದರಲ್ಲಿ ಒಟ್ಟು 25 ಗೋವುಗಳು ಇದ್ದವೆಂದೂ ತಕ್ಷಣವೇ ಅವುಗಳನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿದ ಹಿಂದೂ ಕಾರ್ಯಕರ್ತರು ತಕ್ಷಣವೇ ಪಿಕಪ್ ವಾಹನ ಹಾಗೂ ಆರೋಪಿಗಳನ್ನು ಬಜಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.