ಬಂಟ್ವಾಳ :ಸರಕಾರಿ ಬಸ್ಸಿನಲ್ಲಿ ಅನ್ಯಕೋಮಿನ ವ್ಯಕ್ತಿಯಿಂದ ವಿದ್ಯಾರ್ಥಿಗೆ ಕಿರುಕುಳ ; ಪರಾರಿಯಾಗಲು ಯತ್ನಿಸಿದ ಆರೋಪಿ ಸಾರ್ವಜನಿಕರ ದಕ್ಷತೆಯಿಂದ ಬಂಧನ!

  • 28 Mar 2025 04:27:29 PM

ಬಂಟ್ವಾಳ: ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಅನ್ಯಕೋಮಿನ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಸಂಭವಿಸಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

 

ಬಸ್‌ನಲ್ಲಿ ಅನುಚಿತ ವರ್ತನೆ ನಡೆಸಿದ ಆರೋಪಿಯನ್ನು ಕಲ್ಲಡ್ಕದಲ್ಲಿ ಸಾರ್ವಜನಿಕರು ಬಂಟ್ವಾಳ ನಗರ ಠಾಣೆ ಪೊಲೀಸರಿಗೆ ಹಿಡಿದೊಪ್ಪಿಸಿದ್ದಾರೆ.

 

ನಾವೂರ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಯಾನೆ ಮೋನು ಎಂಬಾತ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಆತ ರಿಕ್ಷಾ ಚಾಲಕನೆಂದು ತಿಳಿದು ಬಂದಿದೆ. ಆತ ಪುತ್ತೂರಿನಿಂದ ಬಿ.ಸಿ.ರೋಡುವರೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯ ಪಕ್ಕದಲ್ಲಿ ನಿಂತು ಉದ್ದೇಶಪೂರ್ವಕವಾಗಿ ಅವಳ ಮೈಮೇಲೆ ಬಿದ್ದು ಕಿರುಕುಳ ನೀಡಿದ ಘಟನೆ ಸಂಭವಿಸಿದೆ. 

 

ವಿದ್ಯಾರ್ಥಿನಿ ತಕ್ಷಣವೇ ಬಸ್ ನಿರ್ವಾಹಕನಿಗೆ ಈ ಬಗ್ಗೆ ದೂರು ನೀಡಿದಾಗ, ನಿರ್ವಾಹಕ ಆರೋಪಿಗೆ ಸರಿಯಾಗಿ ಪ್ರಯಾಣಿಸಲು ಎಚ್ಚರಿಕೆ ನೀಡಿದ್ದರೂ, ಆತ ತನ್ನ ವರ್ತನೆಯನ್ನು ಮುಂದುವರಿಸಿದ್ದ.

 

ಘಟನೆ ಗಂಭೀರವಾಗುತ್ತಿದ್ದು ವಿದ್ಯಾರ್ಥಿನಿ ಮತ್ತೊಮ್ಮೆ ತಿರುಗಿ ಎದುರಿಸಿದಾಗ, ಆತ ಕಲ್ಲಡ್ಕದಲ್ಲಿ ಬಸ್ ನಿಲ್ಲುತ್ತಿದ್ದಂತೆಯೇ ಪರಾರಿಯಾಗಲು ನೋಡಿದರೂ ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಹಾಗೂ ಸ್ಥಳೀಯರು ಕೂಡಲೇ ಪ್ರತಿಕ್ರಿಯಿಸಿ ಆತನನ್ನು ಹಿಡಿದು ಬಂಟ್ವಾಳ ನಗರ ಠಾಣೆಗೆ ಒಪ್ಪಿಸಿದರು.

 

 

 ಸಾರ್ವಜನಿಕರ ಜಾಗೃತೆಯಿಂದ ಆರೋಪಿಯ ತಪ್ಪಿಸಿಕೊಳ್ಳುವ ಪ್ರಯತ್ನ ವಿಫಲಗೊಂಡಿತು.ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.