*ವೇಣೂರು* : *ವೇಣೂರು ಕಾಲೇಜು ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಮೊಬೈಲ್ ನಂಬರಿಗೆ ಒತ್ತಾಯಿಸಿದ್ದ ಅನ್ಯಕೋಮಿನ ವಿಕೃತ ಕಾಮಿ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು*

  • 17 Oct 2024 11:42:33 PM

ವೇಣೂರು : ವೇಣೂರಿನ ಗೋಳಿಯಂಗಡಿಯಲ್ಲಿರುವ ಪ್ರತಿಷ್ಠಿತ ಧರ್ಮಸ್ಥಳ ಐ ಟಿ ಐ ಕಾಲೇಜಿಗೆ ಹೋಗುತ್ತಿರುವ ಹಿಂದು ವಿದ್ಯಾರ್ಥಿನಿಯರನ್ನು ಅವ್ಯಾಚ್ಯ ಶಬ್ದಗಳಿಂದ ಮಾತನಾಡುತ್ತಾ , ನಿಮ್ಮ ಮೊಬೈಲ್ ನಂಬರ್ ಕೊಡಿ ನಿಮ್ಮನು ದಿನಾ ಬೈಕಿನಲ್ಲಿ ಕಾಲೇಜಿಗೆ ಡ್ರಾಪ್ ಮಾಡುತ್ತೇನೆ ಎಂದು ಪೀಡಿಸುತ್ತಿದ್ದ, ಇದರಿಂದ ಗಾಬರಿಗೊಂಡ ಯುವತಿಯರು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ತಿಳಿಸಿದ್ದು, ತಕ್ಷಣಕ್ಕೆ ದಾವಿಸಿ ಬಂಟ್ವಾಳ ಸಜೀಪ ಮೂಲದ ಹುಲ್ಲು ತೆಗೆಯುವ ಮಿಶಿನ್ ರಿಪೇರಿ ಕೆಲಸ ಮಾಡುವ ಜಮಾಲ್ ಎಂಬ ಅನ್ಯಕೋಮಿನ ವಿಕೃತ ಕಾಮಿಯನ್ನೂ ಇಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ, ಈಗ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ