ನೀವು ಎಟಿಎಂ ಬಳಕೆಯ ಮಿತಿಯನ್ನು ಮೀರುತ್ತಿದ್ದೀರಾ? ಎಟಿಎಂ ವಿತ್‌ಡ್ರಾ ಶುಲ್ಕ ₹2 ಏರಿಕೆ ;ಹೊಸ ನಿಯಮ ಅನ್ವಯ!

  • 29 Mar 2025 03:55:51 PM

ನವ ದೆಹಲಿ: ನೀವು ನಿಮ್ಮ ಬ್ಯಾಂಕ್ ಖಾತೆಯಿಂದ ಎಟಿಎಂಗಳ ಮೂಲಕ ಹಣ ವಿತ್‌ಡ್ರಾ ಮಾಡುತ್ತೀರಾ?? ಹಾಗಿದ್ದರೆ ಇದನ್ನು ಪೂರ್ತಿಯಾಗಿ ಓದಿ!.

 

ಎಟಿಎಂ ಮೂಲಕ ಹಣ ವಿತ್ಡ್ರಾ ಮಾಡುವಾಗ ಹೆಚ್ಚು ಶುಲ್ಕ ಕಟ್ಟಿ ತೀರುವ ಸಮಯ ಸಮೀಪಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕ್‌ಗಳಿಗೆ ಈ ಶುಲ್ಕವನ್ನು ಹೆಚ್ಚಿಸಲು ಅನುಮತಿ ನೀಡಿದೆ.

ಮೇ 1ರಿಂದ ಹೊಸ ದರಗಳು ಅನ್ವಯವಾಗಲಿವೆ.

 

ನೂತನ ಶುಲ್ಕಗಳ ವಿವರ:

 

  • ಪ್ರಸ್ತುತ, ಎಟಿಎಂನಿಂದ ತಿಂಗಳಿಗೆ 5 ಬಾರಿಯವರೆಗೆ ಉಚಿತ ವಿತ್‌ಡ್ರಾ ಮಾಡಬಹುದು. ಅದಕ್ಕಿಂತ ಹೆಚ್ಚು ಭಾರಿ ವಿತ್ಡ್ರಾ ಮಾಡಿದ್ದಲ್ಲಿ 2ರೂ ಹೆಚ್ಚಲ್ಲಿಸಲಾಗಿದೆ.
  •  ಅಂದರೆ ಈಗಿನ ₹21ರ ಬದಲು ₹23 ಶುಲ್ಕ ವಿಧಿಸಲಾಗುವುದು.
  • ಇದು ಬ್ಯಾಂಕಿನ ಸ್ವಂತ ಎಟಿಎಂಗಳು ಮತ್ತು ಇತರ ಬ್ಯಾಂಕುಗಳ ಎಟಿಎಂಗಳಿಗೆ ಒಂದೇ ರೀತಿ ಅನ್ವಯವಾಗಲಿದೆ.

 

ಮುಖ್ಯ ನಗರಗಳಲ್ಲಿನ ಉಚಿತ ವಿತ್‌ಡ್ರಾ ಮಿತಿ:

 

▶ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ನವದೆಹಲಿ – ಸ್ವಂತ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ 5 ಉಚಿತ ವಿತ್‌ಡ್ರಾ, ಇತರ ಬ್ಯಾಂಕುಗಳ ಎಟಿಎಂಗಳಲ್ಲಿ 3 ಉಚಿತ ವಿತ್‌ಡ್ರಾ.

▶ ಈ ಮಿತಿ ಮೀರಿದರೆ ಹೆಚ್ಚುವರಿ ₹2ರ ಇಂಟರ್‌ಚೇಂಜ್ ಶುಲ್ಕ ವಿಧಿಸಲಾಗುವುದು.

 

ಹೀಗಾಗಿ, ಅಗತ್ಯವಿಲ್ಲದೆ ಹೆಚ್ಚುವರಿ ವಿತ್‌ಡ್ರಾಗಳನ್ನು ಮಾಡದಂತೆ ಎಚ್ಚರ!