ಸುಳ್ಯ: ಮಹಿಳೆ ಹಲ್ಲೆ ಪ್ರಕರಣ; ಸುಳ್ಯ ನಗರ ಪಂಚಾಯತ್ ಸದಸ್ಯ ಶರಿಫ್ ಕಂಠಿಗೆ ಮಧ್ಯಂತರ ಜಾಮೀನು!-ಬಜರಂಗದಳ ಪ್ರತಿಭಟನೆ ಮುಂದೂಡಿಕೆ!

  • 30 Mar 2025 09:46:14 PM

ಸುಳ್ಯ: ನಗರ ಪಂಚಾಯತ್ ಸದಸ್ಯ ಶರಿಫ್ ಕಂಠಿ ಅವರ ವಿರುದ್ಧ ಮಹಿಳೆಗೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪುತ್ತೂರು ಐದನೇ ಹೆಚ್ಚುವರಿ ನ್ಯಾಯಾಲಯವು ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಅವರು ಇಂದು ಸುಳ್ಯ ಪೊಲೀಸ್ ಠಾಣೆಗೆ ಹಾಜರಾದರು.

 

ಈ ಪ್ರಕರಣವನ್ನು ವಿಚಾರಣೆ ನಡೆಸಿದ ಪುತ್ತೂರು ಜಿಲ್ಲಾ ಐದನೇ ಹೆಚ್ಚುವರಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀಮತಿ ಸರಿತಾ ಡಿ ಅವರು ಜಾಮೀನಿನ ಆದೇಶ ನೀಡಿದ್ದು, ಸರಕಾರಿ ಅಭಿಯೋಜಕರ ಆಕ್ಷೇಪಣೆಗಾಗಿ ಮುಂದಿನ ವಿಚಾರಣೆಯನ್ನು 2025 ಏಪ್ರಿಲ್ 3 ರಂದು ಮುಂದೂಡಲಾಗಿದೆ.

 

ಈ ಸಂಬಂಧ ವಿಶ್ವಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಮಾರ್ಚ್ 31, 2024 ರಂದು ಆಯೋಜಿಸಿದ್ದ ಬೃಹತ್ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಸಂಘಟನೆ ತಿಳಿಸಿದೆ.