ಕಾಟುಕುಕ್ಕೆ: ಬ್ರಹ್ಮಕಲಶೋತ್ಸವದ ಪೂರ್ವ ತಯಾರಿ; ಕಾಟುಕುಕ್ಕೆ ಕ್ಷೇತ್ರದಲ್ಲಿ ಸಂಪ್ರದಾಯಬದ್ಧ ಮಡಲು ಹಣೆ ತಯಾರಿಕೆ ಆರಂಭ!

  • 01 Apr 2025 11:32:12 AM

ಕಾಟುಕುಕ್ಕೆ:ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವ ಸಿದ್ಧತಿಯ ಅಂಗವಾಗಿ ಸಂಪ್ರದಾಯಬದ್ಧ ಮಡಲು ಹೆಣೆಯುವ ಮತ್ತು ಕಸಬರಿಕೆ ತಯಾರಿಕೆಯ ಮೂಲಕ ಆರಂಭಿಸಲಾಯಿತು. 

 

ಈ ಕಾರ್ಯವನ್ನು ಬ್ರಹ್ಮಕಲಶೋತ್ಸವ ಮಾತೃ ಸಮಿತಿಯ ನೇತೃತ್ವದಲ್ಲಿ ರವಿವಾರ ಹಮ್ಮಿಕೊಳ್ಳಲಾಯಿತು.

 

ಕ್ಷೇತ್ರದ ಆಡಳಿತ ಮೊಕ್ತೇಸರ ತಾರನಾಥ ರೈ ಪಡ್ಡಂಬೈಲ್ ಗುತ್ತು ಅವರು ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದರು. 

 

ಈ ಸಂದರ್ಭದಲ್ಲಿ ಕ್ಷೇತ್ರದ ಟ್ರಸ್ಟಿಗಳು, ಮಾತೃ ಮಂಡಳಿಯ ಪದಾಧಿಕಾರಿಗಳು ಹಾಗೂ ಪ್ರಮುಖರು ಭಾಗವಹಿಸಿದರು.

 

ಪ್ರಾದೇಶಿಕ ಸಮಿತಿಯ ಮಹಿಳಾ ಸದಸ್ಯರು ಪರಂಪರಾಗತ ಮಡಲು ಹೆಣೆಯುವ ಮತ್ತು ಹಿಡಿಸೂಡಿ ತಯಾರಿಕಾ ಕಾರ್ಯದಲ್ಲಿ ಪಾಲ್ಗೊಂಡರು. ನುರಿತ ಕಲಾವಿದರು ಇದರ ಪ್ರಾತ್ಯಕ್ಷಿಕೆ ನೀಡಿದರು.

 

 ಬ್ರಹ್ಮಕಲಶೋತ್ಸವಕ್ಕಾಗಿ ಸುಮಾರು 600 ಮಡಲುಗಳ ಅಗತ್ಯವಿರುತ್ತದೆ. ಮುಂದಿನ ದಿನಗಳಲ್ಲಿ ವಿವಿಧ ಪ್ರಾದೇಶಿಕ ಸಮಿತಿಗಳ ಸಹಯೋಗದಲ್ಲಿ ಅವುಗಳನ್ನು ತಯಾರಿಸಿ ದೇವಸ್ಥಾನಕ್ಕೆ ಒದಗಿಸುವ ಯೋಜನೆಯನ್ನು ರೂಪಿಸಲಾಗಿದೆ.

 

ಆಧುನಿಕತೆಯ ನಡುವೆ ಮರೆಯಾಗುತ್ತಿರುವ ಈ ಸಂಪ್ರದಾಯವನ್ನು ಪುನರ್ ಜೀವಿಸುವ ಉದ್ದೇಶದಿಂದ ಮಹಿಳೆಯರು, ಮಕ್ಕಳು ಹಾಗೂ ಎಲ್ಲಾ ವಯೋಮಾನದ ಜನರು ಒಗ್ಗೂಡಿ ಕೈಜೋಡಿಸಿರುವುದು ಆಕರ್ಷನಿಯ ದೃಶ್ಯವಾಗಿದೆ.