ಬೆಂಗಳೂರು: ನಂದಿನಿ ಹಾಲು, ಮೊಸರು, ವಿದ್ಯುತ್, ಟೋಲ್, ಮುದ್ರಾಂಕ ಶುಲ್ಕ ಸೇರಿದಂತೆ ಹಲವಾರು ಸೇವೆಗಳ ದರ ಇಂದಿನಿಂದ (ಏಪ್ರಿಲ್1) ರಿಂದ ಏರಿಕೆಯಾಗಿದೆ.
ನಂದಿನಿಯ ಎಲ್ಲಾ ಬ್ರ್ಯಾಂಡ್‌ನ ಹಾಲಿನ ದರ ಲೀಟರ್‌ಗೆ ₹4 ಏರಿಕೆಯಾಗಿದ್ದು , ಮೊಸರಿನ ದರವೂ ₹4 ಹೆಚ್ಚಾಗಿದೆ. ಪರಿಷ್ಕೃತ ದರವು ಇಂದಿನಿಂದ ಜಾರಿಗೆ ಬಂದಿದೆ.
ಇದರ ಜೊತೆಗೆ, ವಿದ್ಯುತ್ ದರವು ಕೂಡ ಇಂದಿನಿಂದ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳಗೊಂಡಿದೆ. ಮಾಸಿಕ ನಿಗದಿತ ಶುಲ್ಕವೂ ₹20 ಹೆಚ್ಚಿದ್ದು, ಇದರಿಂದ ₹120 ಇದ್ದ ಶುಲ್ಕ ₹140 ಆಗಿ ಏರಿಕೆಯಾಗಿದೆ. ಈ ಹೆಚ್ಚಳದ ಪರಿಣಾಮ ಸಾಮಾನ್ಯ ಜನರ ಮನೆಗೆ ಬರುವ ವಿದ್ಯುತ್ ಬಿಲ್ ಹೆಚ್ಚಾಗಲಿದೆ.
ಹಾಲು ಮತ್ತು ವಿದ್ಯುತ್ ದರ ಏರಿಕೆಯೊಂದಿಗೆ, ಬೆಂಗಳೂರಿನ ಜನರು ಈಗ ಕಸ ನಿರ್ವಹಣಾ ವೆಚ್ಚವನ್ನು ಸಹ ಭರಿಸಬೇಕಾಗಿದೆ.
ಕಟ್ಟಡದ ವಿಸ್ತೀರ್ಣವನ್ನು ಆಧರಿಸಿ ₹10 ರಿಂದ ₹400 ವರೆಗೆ ಬಿಬಿಎಂಪಿಗೆ ಪಾವತಿಸಬೇಕಾಗಿದೆ. ಈ ಹೊಸ ತೆರಿಗೆ ಪ್ರತಿ ಮನೆ, ಅಂಗಡಿ ಮತ್ತು ಕಚೇರಿಗಳಿಗೂ ಕೂಡ ಅನ್ವಯವಾಗಲಿದೆ.