ಉಡುಪಿ: ಮಣಿಪಾಲದ ಅಂಗಡಿಯೊಂದರಲ್ಲಿ ಕಳ್ಳತನ: ಸಿಸಿಟಿವಿಯಲ್ಲಿ ಸೆರೆಯಾದ ಅಪರಾಧಿಗಳು!

  • 02 Apr 2025 04:28:53 PM

ಉಡುಪಿ: ಮಣಿಪಾಲದ ಸಿಂಡಿಕೇಟ್ ಸರ್ಕಲ್ ಹತ್ತಿರದ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ 20 ಸಾವಿರ ರೂ. ನಗದು ಮತ್ತು ಹಲವು ಚಾಕಲೇಟ್ ಗಳನ್ನು ಕಳವುಗೈದ ಘಟನೆ ತಡರಾತ್ರಿ ಸಂಭವಿಸಿದೆ. ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು ಕಳ್ಳರು ಸೆರೆಯಾಗಿದ್ದು, ಅವರು ತಮ್ಮ ಕರಾಮತ್ತನ್ನು ಸ್ಪಷ್ಟವಾಗಿ ಪ್ರದರ್ಶಿಸಿದ್ದಾರೆ.

 

ಕಳ್ಳರು ಮೊದಲು ಕ್ಯಾಶ್ ಕೌಂಟರ್ ನಲ್ಲಿದ್ದ 20 ಸಾವಿರ ರೂ. ನಗದು ಕಳವು ಮಾಡಿ ನಂತರ ಅಂಗಡಿಯಲ್ಲಿ ಇರುವ ವಿವಿಧ ಚಾಕಲೇಟ್ ಮತ್ತು ಕೆಲವೊಂದು ವಸ್ತುಗಳು ಮತ್ತು ಬ್ರೆಶ್ ಸಹ ಕದ್ದುಕೊಂಡು ಪರಾರಿಯಾಗಿದ್ದಾರೆ. ಈ ಘಟನೆಯು ವ್ಯಾಪಾರಸ್ಥರಲ್ಲಿ ಆತಂಕವನ್ನು ಸೃಷ್ಟಿಸಿದೆ.

 

ತಕ್ಷಣವೇ ಮಾಹಿತಿ ಪಡೆದ ಮಣಿಪಾಲ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ.