12 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಸಮ್ಮತಿ!

  • 03 Apr 2025 09:28:11 AM

ದೆಹಲಿ: 14 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆಯು ಬುಧವಾರ ಮಧ್ಯರಾತ್ರಿ 1:43ಕ್ಕೆ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

 

 ಮತದಾನದಲ್ಲಿ 288 ಸದಸ್ಯರು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರು. ಹಾಗೆಯೇ 232 ಮಂದಿ ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದರು.

 

 

12 ಗಂಟೆಗಳ ಸತತ ಉಗ್ರ ಚರ್ಚೆಯ ಬಳಿಕ 2 ಗಂಟೆಗಳ ಕಾಲ ಮತದಾನ ಪ್ರಕ್ರಿಯೆ ನಡೆಸಲಾಗಿತ್ತು. ಮಸೂದೆಯ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಕಠಿಣ ವಾಕ್ಸಮರ ಉಂಟಾಯಿತು.

 

 ಆಡಳಿತ ಪಕ್ಷವು ಮಸೂದೆ ಯಾವುದೇ ಧರ್ಮದ ವಿರುದ್ಧವಲ್ಲ ಎಂದು ಸಮರ್ಥಿಸಿಕೊಂಡರೆ, ವಿರೋಧ ಪಕ್ಷಗಳು ಇದನ್ನು ಮುಸ್ಲಿಮರ ಹಕ್ಕುಗಳ ಹರಣವೆಂದು ವಿರೋಧಿಸಿದರು.

 

ಇದೇ ಮಸೂದೆ ಗುರುವಾರ ರಾಜ್ಯಸಭೆಯಲ್ಲೂ ಮಂಡನೆಯಾಗಲಿದ್ದು 236 ಸದಸ್ಯ ಬಲದ ರಾಜ್ಯಸಭೆಯಲ್ಲಿ ಅಂಗೀಕಾರಕ್ಕಾಗಿ ಕನಿಷ್ಠ 119 ಮತಗಳ ಅಗತ್ಯವಿದೆ. ಇಲ್ಲಿ ಕೂಡಾ ಉಗ್ರ ಚರ್ಚೆ ಹಾಗೂ ತೀವ್ರ ಮತದಾನ ನಡೆಯುವ ಸಾಧ್ಯತೆ ಇದೆ.

 

ರಾಜ್ಯಸಭೆಯ ಅನುಮೋದನೆಯ ನಂತರ, ಮಸೂದೆ ರಾಷ್ಟ್ರಪತಿಗಳ ಸಹಿಗೆ ಕಳಿಸಲಾಗುತ್ತದೆ. ಅವರ ಅನುಮೋದನೆಯ ಬಳಿಕ, ಇದು ಕಾನೂನಾಗಿ ಜಾರಿಗೆ ಬರಲಿದೆ.