ಮುಲ್ಕಿ: ನಂದಿನಿ ನದಿಯ ಪ್ರಾಣ ಹರಣ; ಅಧಿಕಾರಿಗಳ ನಿರ್ಲಕ್ಷ್ಯವೋ? ಮಾಫಿಯಾದ ಪ್ರಭಾವವೋ? ಜಿಲ್ಲಾಡಳಿತದ ಮೌನದ ಹಿಂದಿನ ಸತ್ಯವೇನು??

  • 03 Apr 2025 04:01:56 PM

ಮುಲ್ಕಿ: ಮುಲ್ಕಿ ತಾಲೂಕಿನ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜ-ಮಧ್ಯ ಚೇಳರು ಸೇತುವೆ ಬಳಿ ಅಕ್ರಮ ಮರಳು ಗಣಿಗಾರಿಕೆ ಭಾರೀ ಪ್ರಮಾಣದಲ್ಲಿ ದಿನೇ ದಿನೇ ನಡೆಯುತ್ತಲೇ ಇದೆ. ಪ್ರತಿದಿನ 20ಕ್ಕೂ ಹೆಚ್ಚು ಟಿಪ್ಪರ್‌ಗಳು ನದಿಯ ಒಡಲನ್ನು ತೋಳಿ ಅಕ್ರಮ ಮರಳುಗಾರಿಕೆ ನಡೆಸಿ ನದಿಯನ್ನ ನಾಶಮಾಡುತ್ತಿದ್ದಾರೆ ಇದು ದೊಡ್ಡ ಅಪಾಯಕ್ಕೆ ಆಹ್ವಾನ ಮಾಡಿದಂತೆ ಎಂದು ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

 

ಇಷ್ಟೆಲ್ಲಾ ನಡೆಯುತ್ತಿದ್ದರೂ, ಗಣಿ ಇಲಾಖೆ, ತಾಲೂಕು ದಂಡಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಮೌನ ವಹಿಸಿರುವುದು ಯಾಕೆ?? ಎಂಬುದು ಜನರ ಕಳವಳ ಹೆಚ್ಚಿಸಿದೆ ಎಂದು ಹೇಳುತ್ತಾರೆ 

 

 ಅದಲ್ಲದೆ ಇನ್ನೊಂದು ದುರದೃಷ್ಟಕರ ವಿಚಾರವೆಂದರೆ ಈ ಅಕ್ರಮವನ್ನು ತಡೆಯಲು ಪ್ರಯತ್ನಿಸುವ ಜನರಿಗೇ ಬೆದರಿಕೆಗಳು ಬರುತ್ತದೆ ಬಿಟ್ಟರೆ ಮರಳುಗಾರಿಕೆ ನಿಲ್ಲುವುದಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಮಾಫಿಯಾ ತಂಡದಿಂದ ಬರುವ ನೋಟಿನ ಬಿಸಿಯ ಪ್ರಭಾವವೋ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ನಾಗರಿಕರು ಆಕ್ರೋಷ ಗೊಂಡಿದ್ದಾರೆ.

 

ನಂದಿನಿ ನದಿ ತುಳುನಾಡಿನ ಜೀವನಾಡಿ. ಈ ರೀತಿಯಾಗಿ ಅಕ್ರಮ ಗಣಿಗಾರಿಕೆಯಿಂದ ನದಿ ಶೋಷಣೆಯಾಗುವುದನ್ನು ತಡೆಯಲು ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಭವಿಷ್ಯದಲ್ಲಿ ಪರಿಸರಕ್ಕೆ ಉಂಟಾಗುವ ಹಾನಿಯನ್ನು ತಡೆಹಿಡಿಯುವುದು ಅಸಾಧ್ಯ ಎಂದು ಅಲ್ಲಿನ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

ಈ ಅಕ್ರಮದ ವಿರುದ್ಧ ಸಾರ್ವಜನಿಕರು ಹಕ್ಕೊತ್ತಾಯ ಮಾಡಬೇಕು. ಜಿಲ್ಲಾಡಳಿತ ಕೂಡಾ ತಕ್ಷಣ ಸ್ಪಂದಿಸಿ, ಈ ಗಣಿಗಾರಿಕೆಯನ್ನು ನಿಲ್ಲಿಸಲು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.