ಮಂಗಳೂರು: ಮಂಗಳೂರಿನಲ್ಲಿ ಒಂದು ಅನಿರೀಕ್ಷಿತ ರೈಲು ದುರ್ಘಟನೆ ಸಂಭವಿಸಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಿಂದ ನರಿಮೊಗರು ಬಳಿ ಒಬ್ಬ ಪ್ರಯಾಣಿಕ ಅನಾಯಾಸವಾಗಿ ಕೆಳಗೆ ಬಿದ್ದ ಘಟನೆ ಮಧ್ಯರಾತ್ರಿ ಸಂಭವಿಸಿದೆ. ಈ ಘಟನೆಯು ತಡರಾತ್ರಿ ಸಂಭವಿಸಿದ್ದರಿಂದ ಯಾರಿಗೂ ತಿಳಿಯದೆ ಹೋಯಿತು ಎಂದು ತಿಳಿದುಬಂದಿದೆ
ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾದ ರೈಲ್ವೆ ಸಿಬ್ಬಂದಿ, ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕಂಡು ತಕ್ಷಣವೇ ಅಸ್ಪತ್ರೆಗೆ ಸೇರಿಸಿರುತ್ತಾರೆ. ಗಾಯಗೊಂಡವರನ್ನು ಸಕಲೇಶಪುರದ ನಿವಾಸಿ ಉಮೇಶ್ ಎಂದು ತಿಳಿದು ಬಂದಿದೆ.
ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಅವರು ದುರ್ಘಟನಾವಶಾತ್ ರೈಲಿನಿಂದ ಕೆಳಗೆ ಬಿದ್ದು ಭಾರಿ ಗಾಯಗೊಂಡಿದ್ದಾರೆ. ಪ್ರಸ್ತುತ ಆಸ್ಪತ್ರೆಗೆ ದಾಖಲಾದ ಅವರು ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.