ಅಂಗವಿಕಲ ಸೈನಿಕರ ಪಿಂಚಣಿ ಸಮಸ್ಯೆಗೆ ‘ಸಿಂಗಲ್ ವಿಂಡೋ’ ಪರಿಹಾರ: ಸಂಸತ್ತಿನಲ್ಲಿ ಸಂಸದ ಚೌಟ ಅವರ ಪ್ರಮುಖ ಬೇಡಿಕೆ!

  • 04 Apr 2025 10:41:57 AM

ನವದೆಹಲಿ: ದೇಶ ಸೇವೆಗೆಂದು ತಮ್ಮ ಜೀವನವನ್ನು ಮುಡಿಪಾಗಿಟ್ಟ ಯೋಧರು ಯುದ್ಧ ಹೋರಾಟಗಳ ಮಧ್ಯೆ ತನ್ನ ಜೀವನವನ್ನೇ ತ್ಯಾಗ ಮಾಡುತ್ತಾರೆ. ಕೆಲವೊಂದು ಸಲ ಅಂಗವೈಕಲ್ಯದಿಂದಾಗಿ ಸೇವೆಯನ್ನು ಬಿಟ್ಟು ಬರಬೇಕಾಗುತ್ತದೆ.

 

ಇಂತಹ ಸಂದರ್ಭದಲ್ಲಿ ಅಂಗವೈಕಲ್ಯ ಪಿಂಚಣಿಯು ಅವರಿಗೆ ಆಸರೆಯಾಗಿರುತ್ತದೆ. ಅದರೆ ಅದನ್ನು ಪಡೆಯುದರಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದಾರೆ.

 

ಸೈನಿಕರು ಕರ್ತವ್ಯ ನಿರ್ವಹಣೆಯ ವೇಳೆ ಗಾಯಗೊಂಡು ಅಂಗವಿಕಲರಾಗಿದಾಗ ಅವರ ಪಿಂಚಣಿ ಪ್ರಕ್ರಿಯೆ ಸರಳಗೊಳಿಸುವ ಅಗತ್ಯವಿದೆ. "ನಾನು ಒಬ್ಬ ಸೈನಿಕನಾಗಿ, ಯೋಧರ ಪರವಾಗಿ ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ದೇಶಕ್ಕಾಗಿ ತಮ್ಮ ಜೀವವನ್ನು ಅರ್ಪಿಸಿದ ಯೋಧರು ಪಿಂಚಣಿ ಪಡೆಯಲು ಕೋರ್ಟ್‌-ಕಚೇರಿಗಳ ನಡುವೆ ಅಲೆದಾಡಬೇಕಾದ ಪರಿಸ್ಥಿತಿ ಉಂಟಾಗಗಬಾರದು. ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.

 

ಅಧಿಕಾರಿಗಳು ಅನವಶ್ಯಕ ದಾಖಲೆಗಳ ಹೆಸರಿನಲ್ಲಿ ನಿವೃತ್ತ ಯೋಧರನ್ನು ಅಡ್ಡಿ ಪಡಿಸುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರವು ‘ಸಿಂಗಲ್ ವಿಂಡೋ’ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಮತ್ತು ಪಿಂಚಣಿ ಪ್ರಕ್ರಿಯೆಯನ್ನು ಸುಗಮಗೊಳಿಸ ಬೇಕಾಗಿ ಅವರು ಒತ್ತಾಯಿಸಿದರು.

 

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಸೈನಿಕರ ಭವಿಷ್ಯದ ಒಳಿತಿಗಾಗಿ ಕಾಯುವ ನಿಟ್ಟಿನಲ್ಲಿ ಬದ್ಧವಾಗಿದೆ ಎಂಬ ಅವರು ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ತಕ್ಷಣವೇ ಈ ಕುರಿತಾಗಿ ಕ್ರಮ ಕೈಗೊಂಡು ನಿವೃತ್ತ ಸೈನಿಕರಿಗೆ ನ್ಯಾಯ ಒದಗಿಸಬೇಕೆಂದು ಅವರು ಸದನದಲ್ಲಿ ಮನವಿ ಮಾಡಿಕೊಂಡಿದ್ದಾರೆ.