ಇತ್ತೀಚಿನ ದಿನಗಳಲ್ಲಿ ಯಾವ ಸಾಮಾಜಿಕ ಜಾಲತಾಣ ತೆರುದು ನೋಡಿದರೂ ಘಿಬ್ಲಿಯದ್ದೆ ಹವ. ಸಾಮಾಜಿಕ ಮಾಧ್ಯಮಗಳಲ್ಲಿ ಇದು ಹೊಸ ಸಂಚಲನವನ್ನೇ ಸೃಷ್ಟಿಸಿದೆ.
ಸ್ನೇಹಿತರೊಡನೆ ಅಥವಾ ವೈಯಕ್ತಿಕವಾಗಿ ತೆಗೆದ ಫೋಟೋಗಳನ್ನು ಈ ಎನಿಮೇಟೆಡ್ ಶೈಲಿಗೆ ಪರಿವರ್ತಿಸಿ ಹಂಚಿಕೊಳ್ಳುವ ಟ್ರೆಂಡ್ ಆಗಿ ಮಾರ್ಪಟ್ಟಿದೆ.
ಎಐ ಆಧಾರಿತ ತಂತ್ರಜ್ಞಾನದಿಂದ ಚಿತ್ರಗಳು ಅದ್ಭುತವಾಗಿ ಬದಲಾಗುತ್ತಿದ್ದರೂ, ಇದರ ಪರಿಣಾಮಗಳ ಕುರಿತು ಹೆಚ್ಚಿನವರಿಗೂ ತಿಳಿದಿರುವುದಿಲ್ಲ. ಈ ಆ್ಯಪ್‌ಗಳು ಬಳಕೆದಾರರ ಮಾಹಿತಿಯನ್ನು ಹೇಗೆ ಬಳಸುತ್ತವೆ ಎಂಬುದರ ಬಗ್ಗೆ ಯಾವುದೇ ಅರಿವು ಇರುವುದಿಲ್ಲ. .
ಸೈಬರ್ ತಜ್ಞರು ಮತ್ತು ಪೊಲೀಸರು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಘಿಬ್ಲಿ ಫಿಲ್ಟರ್ ಆ್ಯಪ್‌ಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು ಎಂಬ ಆತಂಕ ವ್ಯಕ್ತವಾಗಿದೆ. ಮುಖದ ಗುರುತು, ಮೆಟಾಡೇಟಾ, ಲೋಕೆಷನ್ ಮಾಹಿತಿಯಂತಹ ಸೂಕ್ಷ್ಮ ಮಾಹಿತಿ ಹಂಚಿಕೊಳ್ಳುವ ಅಪಾಯವನ್ನು ನಿರ್ಲಕ್ಷ್ಯ ಮಾಡಲಾಗದು ಎಂದು ಎಚ್ಚರಿಕೆ ನೀಡಿದ್ದಾರೆ .
ನೀವು ಟ್ರೆಂಡ್‌ನ ಜತೆಗೆ ಹೆಜ್ಜೆ ಹಾಕುತ್ತಿದ್ದರೂ, ಇದು ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುವ ಸಾಧ್ಯತೆ ಇದೆ ಎಂಬ ಅಂಶವನ್ನು ಮರೆಯದೀರಿ ಎಂದು ಸೂಚಿಸಿದ್ದಾರೆ.
ಈ ಹಿನ್ನೆಲೆ ದೃಷ್ಠಿಯಿಂದ, ಯಾವುದೇ ಹೊಸ ತಂತ್ರಜ್ಞಾನ ಬಳಸುವ ಮುನ್ನ ಯೋಚಿಸಿ ಬಳಸಬೇಕು. ವೈಯಕ್ತಿಕ ಫೋಟೋಗಳನ್ನು ಇಂತಹ ಆ್ಯಪ್‌ಗಳಲ್ಲಿ ಅಪ್ಲೋಡ್ ಮಾಡುವ ಮುನ್ನ, ಅವು ವಿಶ್ವಾಸಾರ್ಹವಾಗಿದೆಯಾ ಎಂಬುದನ್ನು ಪರಿಶೀಲಿಸಿ ಬಳಸಬೇಕು.