ಬಾಳೆಗೊನೆಯಿಂದ ಮರೆಮಾಚಿದ ಅಕ್ರಮ ಗೋ ಸಾಗಾಟ ಪತ್ತೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ತ್ವರಿತ ಕಾರ್ಯಾಚರಣೆಯಿಂದ15 ಗೋವುಗಳ ರಕ್ಷಣೆ!

  • 04 Apr 2025 08:30:43 PM

ಗುರುವಾಯನಕೆರೆ: : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಇನ್ನೊಂದು ಅಕ್ರಮ ಗೋ ಸಾಗಾಟವನ್ನು ತಡೆದು 15 ಗೋವುಗಳನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

 

ಸೌಜನ್ಯ ಹೋರಾಟದ ಪ್ರಚಾರದ ಭಾಗವಾಗಿ ತಡರಾತ್ರಿ ಬಿತ್ತಿಪತ್ರಗಳನ್ನು ವಿತರಿಸುತ್ತಿದ್ದ ಕಾರ್ಯಕರ್ತರಿಗೆ, ಗುರುವಾಯನಕೆರೆಯಲ್ಲಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಪಿಕಪ್ ವಾಹನವೊಂದು ಕಂಡು ಬಂತು. ಇದರಲ್ಲಿ ಅಕ್ರಮ ಗೋವು ಸಾಗಾಟ ನಡೆಯುತ್ತಿರುವುದು ಗಮನಕ್ಕೆ ಬಂದು ತಕ್ಷಣ ಚಾಲಕನನ್ನು ಬೆನ್ನಟ್ಟಿದರು. ಜಾರಿಗೆಬೈಲಿನವರೆಗೆ ಹತ್ತಿರದ ಕಾರ್ಯಕರ್ತರು ಬೆನ್ನು ಹತ್ತಿದರು.

 

ಅಲ್ಲಿಗೆ ತಲುಪಿದಾಗ, ಪಿಕಪ್ ವಾಹನದ ಮೇಲ್ಭಾಗದಲ್ಲಿ ಬಾಳೆಗೊಣೆ ಕಟ್ಟಿ ಹಾಕಿದ್ದು, ಅದರ ಅಡಿಭಾಗದಲ್ಲಿ ಅಮಾನುಷವಾಗಿ 15 ಗೋವುಗಳನ್ನು ಕಸಾಯಿಕಾನೆಗೆ ಸಾಗಿಸುತ್ತಿದ್ದ ದೃಶ್ಯ ಬೆಳಕಿಗೆ ಬಂತು.

 

 ಈ ಕೃತ್ಯವನ್ನು ತಡೆಯಲು ಕಾರ್ಯಕರ್ತರು ತಕ್ಷಣ ಕ್ರಮ ಕೈಗೊಂಡರು. ಸ್ಥಳಕ್ಕೆ ತಕ್ಷಣ ಪೊಲೀಸ್‌ರನ್ನು ಕರೆಸಿ, ಎಲ್ಲಾ ಗೋವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ಹಸ್ತಾಂತರಿಸಲಾಯಿತು.