ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ಶಂಕರನಾರಾಯಣ ಕಾಲೇಜಿಗೆ ಸೋಲಾರ್ ಸಿಸ್ಟಮ್ ಮತ್ತು ಕಂಪ್ಯೂಟರ್ ಸೌಲಭ್ಯ ಉದ್ಘಾಟನೆಗೆ ಸಜ್ಜು!

  • 04 Apr 2025 09:02:39 PM

ಶಂಕರನಾರಾಯಣ: ಶಂಕರನಾರಾಯಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸೋಲಾರ್ ಆಫ್‌ಗ್ರಿಡ್ ಸಿಸ್ಟಮ್ ಮತ್ತು ಗಣಕ ಯಂತ್ರಗಳ ಉದ್ಘಾಟನಾ ಕಾರ್ಯಕ್ರಮವನ್ನು ಏಪ್ರಿಲ್ 5, 2025ರಂದು ಬೆಳಿಗ್ಗೆ 9.30 ಕ್ಕೆ ವಿಜೃಂಭಣೆಯಿಂದ ನೆರವೇರಲಿದೆ.

 

ಈ ಕಾರ್ಯಕ್ರಮದಲ್ಲಿ ಕ್ಯಾನ್‌ಫಿನ್ ಹೋಮ್ಸ್ ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡಿರುವ 45 KWH ಸಾಮರ್ಥ್ಯದ ಸೋಲಾರ್ ಆಫ್‌ಗ್ರಿಡ್ ಸಿಸ್ಟಮ್ ಮತ್ತು 5 ಸೋಲಾರ್ ಬೀದಿ ದೀಪಗಳು ಹಾಗೂ ಕೆನರಾ ಬ್ಯಾಂಕ್ ವತಿಯಿಂದ 08 ಗಣಕ ಯಂತ್ರಗಳನ್ನು ನೀಡಲಾಗುವುದರ ನೀಡಲಾಗುತ್ತದೆ.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ವಹಿಸಲಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳು ಕಾಲೇಜಿನ ಶೈಕ್ಷಣಿಕ ಪರಿಸರವನ್ನು ಬಲಪಡಿಸಿ, ವಿದ್ಯಾರ್ಥಿಗಳಿಗೆ ನವೀನ ಸೌಲಭ್ಯಗಳನ್ನು ಒದಗಿಸುವಲ್ಲಿ ಸಹಾಯಕವಾಗಲಿವೆ.