ಯುವತಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ: ಯುವಕನಿಗೆ ಸಾರ್ವಜನಿಕರಿಂದ ಖಡಕ್ ಪಾಠ! ; ಪೊಲೀಸರು ವಶಕ್ಕೆ

  • 06 Apr 2025 03:39:36 PM


ಬಂಟ್ವಾಳ : ಯುವತಿಯರಿಗೆ ಮೊಬೈಲ್ ನ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಯುವಕನೊಬ್ಬನು, ಶನಿವಾರ ಬಂಟ್ವಾಳ ತಾಲ್ಲೂಕಿನ ಕೊಲ್ನಾಡು ಗ್ರಾಮದ ಕುಡ್ತಮುಗೈರಿ ಎಂಬ ಸ್ಥಳದಲ್ಲಿ ರಿಢಂಡ್ ಆಗಿ ಸಿಕ್ಕಿ ಬಿದ್ದು ಸ್ಥಳೀಯರಿಂದ ಥಳಿಸಲ್ಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

 

ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಕನ್ಯಾನ ಗ್ರಾಮದ ಪಂಜಾಜೆ ನಿವಾಸಿ ಸವಾದ್ (20) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಕೋರಮಂಗಲದಲ್ಲಿರುವ ಬಟ್ಟೆ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ. ಸವಾದ್ ಯುವತಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದುದಲ್ಲದೆ, ತಡರಾತ್ರಿ ಅವಾಚ್ಯ ವಿಡಿಯೋ ಕರೆಗಳಿಗೂ ಯತ್ನಿಸುತ್ತಿದ್ದ. ಕೆಲ ಸಂದರ್ಭಗಳಲ್ಲಿ ಅಶ್ಲೀಲ ಬೇಡಿಕೆಗಳನ್ನು ಇಡುತ್ತಿದ್ದ ಎಂಬುದಾಗಿ ಆರೋಪಗಳಲ್ಲಿದೆ.

 

ಇದರಿಂದ ಹದಗೆಟ್ಟ ಯುವತಿಯರೊಬ್ಬರ ದೂರಿನ ಮೇರೆಗೆ ಯುವಕರ ಗುಂಪೊಂದು ಖಚಿತ ಪ್ಲಾನ್ ರೂಪಿಸಿ, ಬೇರೊಂದು ನಂಬರ್‌ನಿಂದ ಹುಡುಗಿಯ ಹೆಸರಿನಲ್ಲಿ ಸವಾದ್‌ನನ್ನು ಸಂಪರ್ಕಿಸಲು ಪ್ರಯತ್ನಿಸಿದ ಈ. ಪ್ಲಾನ್ ಗೆ ಫಲ ಸಿಕ್ಕಿದೆ.

 

 ಆತ ಯುವತಿಯನ್ನು ನಂಬಿ, ಭೇಟಿಯಾಗಲು ಕುಡ್ತಮುಗೈರಿಗೆ ಬಂದಾಗ ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಆತನನ್ನು ಬಂಟ್ವಾಳ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

 

ಪೊಲೀಸರು ಈ ಕುರಿತು ತನಿಖೆ ಮುಂದುವರೆಸಿದ್ದಾರೆ. ಸೈಬರ್ ಕ್ರೈಮ್ ಕಾನೂನುಡಿ ತನಿಖೆ ನಡೆಯುವ ಸಾಧ್ಯತೆ ಇದೆ.