ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಬಂಟ್ವಾಳ ಪ್ರಖಂಡದ ನೇತೃತ್ವದಲ್ಲಿ ಆಯೋಜಿಸಿದ ಅಮ್ಮನೆಡೆಗೆ ನಮ್ಮ ನಡಿಗೆ ಎಂಬ ಹೆಸರಿನಲ್ಲಿ ಪೊಳಲಿ ಕ್ಷೇತ್ರದ 5ನೇ ವರ್ಷದ ಪಾದಯಾತ್ರೆ ಭಕ್ತಿಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ಈ ಪಾದಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಪಾದಯಾತ್ರೆಯ ಮುಖ್ಯ ಉದ್ದೇಶಗಳಾಗಿ ಕ್ಷೇತ್ರದಲ್ಲಿ ವಸ್ತ್ರ ಸಂಹಿತೆಯ ಅನುಷ್ಠಾನ, ಗೋಶಾಲೆಯ ಸ್ಥಾಪನೆ, ಹಿಂದೂ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲು ಬಾಲ ಸಂಸ್ಕಾರ ಕೇಂದ್ರಗಳ ಸ್ಥಾಪನೆ, ಬಡ ಕುಟುಂಬಗಳಿಗಾಗಿ ಸಾಮೂಹಿಕ ಮದುವೆಗಳ ಆಯೋಜನೆ, ಹಾಗೂ ಜಾತ್ರಾ ಸಂದರ್ಭದಲ್ಲಿ ಪವಿತ್ರ ಗೋಧನ ಹತ್ಯೆ ಮತ್ತು ಭಕ್ಷಣೆ ಮಾಡುವ ಅನ್ಯಮತೀಯರಿಗೆ ವ್ಯಾಪಾರದ ಅವಕಾಶ ನಿರಾಕರಣೆ ಎಂಬಂತೆ ಹಲವು ಸಮಾಜಮುಖಿ ಮನವಿಗಳನ್ನು ಮಾಡಲಾಯಿತು.
ದಿನಾಂಕ 6.4.2025ರಂದು ಬೆಳಿಗ್ಗೆ 5.30ಕ್ಕೆ ತ್ರಿದ್ವಾರಗಳಿಂದ ಬಂಟ್ವಾಳದ ಬಿ.ಸಿ.ರೋಡು ಕೈಕಂಬ, ಕಡೆಗೋಳಿ ಹಾಗೂ ಗುರುಪುರ ಕೈಕಂಬ ದ್ವಾರಗಳಿಂದ ಪಾದಯಾತ್ರೆಯು ಘೋಷಣೆ ಮತ್ತು ಭಾರತಮಾತೆಗೆ ಪುಷ್ಪಾರ್ಚನೆ ಜೊತೆಗೆ ಪ್ರಾರಂಭವಾಯಿತು.
ಸಾವಿರಾರು ಜನ ಭಾಗವಹಿಸಿದ ಈ ಪಾದಯಾತ್ರೆಯಲ್ಲಿ ಹಲವಾರು ಸಂಘ-ಸಂಸ್ಥೆಗಳು ತಂಪು ಪಾನೀಯ ಹಾಗೂ ಉಪಹಾರದ ವ್ಯವಸ್ಥೆಗಳನ್ನು ಮಾಡಿದ್ದವು.
ಕಾರ್ಯಕ್ರಮದಲ್ಲಿ ಡಾ. ಕೃಷ್ಣ ಪ್ರಸನ್ನ, ಪ್ರಸಾದ್ ಕುಮಾರ್ ರೈ, ಭರತ್ ಕುಮ್ಡೇಲ್, ಸಂತೋಷ್ ಸರಪಾಡಿ, ರಾಜೇಶ್ ಗಂಜಿಮಠ, ಶಿವಪ್ರಸಾದ್ ತುಂಬೆ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.