ಕಾನೂನು ಕ್ರಮದಲ್ಲಿ ದ್ವೇಷ ಸಾಧನೆಯ ಆರೋಪ ; ಕ್ರಿಮಿನಲ್ ಚಟುವಟಿಕೆಯ ಆರೋಪದ ಹೆಸರಿನಲ್ಲಿ ನೋಟಿಸ್!

  • 08 Apr 2025 07:30:43 PM


ಬಂಟ್ವಾಳ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಇಲ್ಲಸಲ್ಲದ ಆರೋಪಗಳೊಂದಿಗೆ ನೋಟಿಸ್‌ ಜಾರಿಗೆ ಮುಂದಾಗುತ್ತಿರುವುದರ ವಿರುದ್ಧ ಹಿಂದೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 

ಈ ವೇಳೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹೋಬಳಿ ಬಾಲ ಗ್ರಾಮದ ಹಿಂದು ಪರ ಸಂಘಟನೆಯ ಪ್ರಖಂಡರಾದ ಅಕ್ಷಯ್ ರಾಜಪೂತ್‌ ಅವರಿಗೆ ನಿರಂತರವಾಗಿ ನೋಟಿಸ್‌ಗಳನ್ನು ಜಾರಿ ಮಾಡುವುದರ ಮೂಲಕ ದುರುದ್ದೇಶವಿದೆ ಎಂಬುದರ ವಿರುದ್ಧ ಹಿಂದುಕಾರ್ಯಕರ್ತರು ಕಿಡಿಕಾರಿದ್ದಾರೆ.

 

ವಿಟ್ಲ ಪೊಲೀಸ್ ಠಾಣೆಯ ವರದಿಯ ಪ್ರಕಾರ, ಅಕ್ಷಯ್‌ ರಾಜಪೂತ್‌ ವಿರುದ್ಧ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವುದಾಗಿ ಆರೋಪಿಸಿ, ಮುಂದಿನ ದಿನಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ BNSS 2023 ನ ಕಲಂ 126 ಅಡಿಯಲ್ಲಿ ಮುಚ್ಚಳಿಕೆ ನೋಟಿಸ್ ಜಾರಿಗೊಳಿಸಲಾಗಿದೆ.

 

 ನೋಟಿಸಿನಲ್ಲಿ ಅಕ್ಷಯ್‌ ಅವರು ರೂ. 50,000 ಭದ್ರತೆ ಮತ್ತು ಸ್ಥಳೀಯ ಗೌರವಾನ್ವಿತ ವ್ಯಕ್ತಿಯ ಭದ್ರತೆ ನೀಡಬೇಕೆಂದು ಸೂಚನೆ ನೀಡಲಾಗಿದೆ. ಈ ಬಗ್ಗೆ 09-04-2025 ರಂದು ಸ್ಪಷ್ಟನೆ ನೀಡಬೇಕಿದೆ ಎಂದು ತಿಳಿಸಿದೆ.

 

ಆದರೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಈ ಕ್ರಮವನ್ನು ಖಂಡಿಸಿ, "ಅಕ್ಷಯ್ ರಾಜಪೂತ್‌ ಅವರು ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಒಳ್ಳೆಯ ಮುಖಂಡರು. ಅವರ ವಿರುದ್ಧ ಆರೋಪ ಇಲ್ಲದ ಸಲ್ಲದ ಮಾಡುವುದು ದುರದುದ್ದೇಶಪೂರ್ಣ ದ್ವೇಷದಿಂದ ಕೂಡಿದೆ ಎಂದು ಅವರು ಆರೋಪಿಸಿದ್ದಾರೆ